ETV Bharat / state

ಮನಸ್ಸಿಗೆ ನೋವಾಗಿ ಸಿಎಂ ರಾಜೀನಾಮೆ ವಿಷಯ ಮಾತನಾಡಿದ್ದಾರೆ: ಲಕ್ಷ್ಮಣ ಸವದಿ - ಸಿಎಂ ರಾಜೀನಾಮೆ ವಿಚಾರ

ಸಿಎಂ ಬಿ.ಎಸ್​​.ಯಡಿಯೂರಪ್ಪನವರು ಮನಸ್ಸಿಗೆ ನೋವಾಗಿ ರಾಜೀನಾಮೆ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

DCM Laxman Savadi
ಡಿಸಿಎಂ ಲಕ್ಷ್ಮಣ ಸವದಿ
author img

By

Published : Jun 7, 2021, 12:08 PM IST

ಅಥಣಿ: ರಾಜ್ಯದಲ್ಲಿ ಕೆಲವರು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಕುರಿತ ಚರ್ಚೆ ಅನಗತ್ಯವಾಗಿದ್ದು ಸಿಎಂ ಬಿ.ಎಸ್​​. ಯಡಿಯೂರಪ್ಪನವರು ಮನಸ್ಸಿಗೆ ನೋವಾಗಿ ರಾಜೀನಾಮೆ ವಿಚಾರ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.

ಸಿಎಂ ರಾಜೀನಾಮೆ ವಿಚಾರದ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಕೆಲವರು ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಸಿಎಂ ಬೇಜಾರು ಮಾಡಿಕೊಂಡು ಈ ಮಾತುಗಳನ್ನು ಹೇಳಿರಬಹುದು ಎಂದರು.

ಹೆಚ್.ವಿಶ್ವನಾಥ್​​, ಉತ್ತರ ಕರ್ನಾಟಕ ಭಾಗದವರು ಸಿಎಂ ಆಗುವುದರಲ್ಲಿ ತಪ್ಪಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆ ವೈಯಕ್ತಿಕ ವಿಚಾರ. ಇದು ಯಾವುದೇ ಪಕ್ಷದ ನಿರ್ಧಾರ ಅಲ್ಲ. ಎಲ್ಲದಕ್ಕೂ ಹೈಕಮಾಂಡ್ ಇದೆ. ಸಿಎಂ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸವದಿ ಹೇಳಿದರು.

ಇದನ್ನೂ ಓದಿ: ಕೆಲವರ ಹೇಳಿಕೆಗಳಿಗೆ ಬೇಸತ್ತು ಸಿಎಂ ರಾಜೀನಾಮೆ ಮಾತನಾಡಿದ್ದಾರೆ : ಶಾಸಕ ನಿರಂಜನ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.