ಅಥಣಿ: ಇಲ್ಲಿನ ತಾಲೂಕು ಸಮುದಾಯ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ನಡೆಯಿತು.
ತಾಲೂಕಿನಲ್ಲಿ ಇಂದು 25 ಜನರ ಮೇಲೆ ಕೊರೊನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಈ ವೇಳೆ ತಾಲೂಕು ವೈದ್ಯಾಧಿಕಾರಿ ಬಸವರಾಜ ಕಾಗೆ ಮಾತನಾಡಿ, ಐದು ಹಂತಗಳನ್ನು ಮಾಡಿಕೊಂಡು ಯಾವುದೇ ತಪ್ಪು ಆಗದಂತೆ ಡ್ರೈ ರನ್ ನಡೆಸಲಾಗಿದೆ. ಮುಂದೆ ಕೊರೊನಾ ಲಸಿಕೆ ಬರುವುದರಿಂದ ಈಗಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಿದ ವ್ಯಕ್ತಿಯನ್ನು 30 ನಿಮಿಷ ಪರೀಕ್ಷೆ ವೀಕ್ಷಣೆಗಾಗಿ ಒಳಪಡಿಸಲಾಗುತ್ತದೆ. ಇದರಿಂದ ಲಸಿಕೆ ಪಡೆಯುವರು ಭಯ ಮುಕ್ತವಾಗಿ ವ್ಯಾಕ್ಸಿನ್ ಪಡೆಯಬಹುದು ಎಂದರು.
ಓದಿ: ಜಿಟಿಡಿ ಪ್ರಶ್ನಾತೀತ ನಾಯಕ, ಪಕ್ಷದಲ್ಲಿಯೇ ಉಳಿಯುತ್ತಾರೆ: ಸಾ.ರಾ. ಮಹೇಶ್
ಬಳಿಕ ಅಣಕು ಪ್ರದರ್ಶನದ ಲಸಿಕೆ ತಾಲೀಮಿನಲ್ಲಿ ಭಾಗವಹಿಸಿದ್ದ ರಾಜಶ್ರೀ ಎಂಬುವರು ಮಾತನಾಡಿ, ಮೊದಲಿಗೆ ಕೊರೊನಾ ಲಸಿಕೆ ಬಗ್ಗೆ ತುಂಬಾ ಹೆದರಿಕೆ ಇತ್ತು. ತಾಲೂಕು ಆಡಳಿತ ನಮಗೆ ಸರಿಯಾದ ಮಾಹಿತಿ ನೀಡಿ ಧೈರ್ಯ ತುಂಬಿದ ಕಾರಣ ಯಾವುದೇ ಭಯ ಇಲ್ಲದೆ ಲಸಿಕೆ ತಾಲೀಮಿನಲ್ಲಿ ಭಾಗವಹಿಸಿದ್ದೇವೆ. ಇನ್ನು ಲಸಿಕೆ ಬಂದ ನಂತರ ಅವಕಾಶ ಸಿಕ್ಕರೆ ನಾನೇ ಮೊದಲು ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.