ETV Bharat / state

ನಿಪ್ಪಾಣಿ ನಗರದ ಬಡವರಿಗೆ ದೀಪಾವಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ.. - ನಿಪ್ಪಾಣಿ ಪಟ್ಟಣದಲ್ಲಿ ರಾಜೀವ್​ಗಾಂಧಿ ವಸತಿ ನಿಗಮ

ನಿಪ್ಪಾಣಿ ನಗರದ ಶಿಂಧೆ ನಗರದಲ್ಲಿ 22 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಮನೆಗಳು, ಕೇವಲ 18 ರಿಂದ 20 ತಿಂಗಳಲ್ಲಿ ಮನೆ ಕಟ್ಟಿ ಪೂರ್ಣ ಮಾಡಿತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು..

construction-of-group-houses-for-the-poor-of-nippani-town
ನಿಪ್ಪಾಣಿ ನಗರದ ಬಡವರಿಗೆ ದೀಪಾವಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ..
author img

By

Published : Nov 11, 2020, 7:02 PM IST

ಚಿಕ್ಕೋಡಿ: ನಿಪ್ಪಾಣಿ ಪಟ್ಟಣದ ಬಡವರಿಗೆ ಗುಂಪು ಮನೆಗಳ ನಿರ್ಮಾಣ ಕಾಮಗಾರಿಯ ಕಾರ್ಯಕ್ಕೆ ವಸತಿ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ಮಾಡಿದರು.

ನಿಪ್ಪಾಣಿ ನಗರದ ಬಡವರಿಗೆ ದೀಪಾವಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ..

ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ರಾಜೀವ್​ಗಾಂಧಿ ವಸತಿ ನಿಗಮ ನಿ. ಬೆಂಗಳೂರು ಜಿಲ್ಲಾಡಳಿತ ಹಾಗೂ ನಗರಸಭೆ ನಿಪ್ಪಾಣಿ ಇವರ ಸಂಯುಕ್ತಾಶ್ರಯದಲ್ಲಿ.

ಪಿಎಂಎವೈ- ಎಹೆಚ್‌ಸಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ 2052 (ಜಿ+2) ಮಾದರಿಯ ಗುಂಪು ಮನೆಗಳ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಸಾಥ್ ನೀಡಿದ್ದಾರೆ.

ನಿಪ್ಪಾಣಿ ನಗರದ ಶಿಂಧೆ ನಗರದಲ್ಲಿ 22 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಮನೆಗಳು, ಕೇವಲ 18 ರಿಂದ 20 ತಿಂಗಳಲ್ಲಿ ಮನೆ ಕಟ್ಟಿ ಪೂರ್ಣ ಮಾಡಿತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಮಾತು :

ಸಿಎಂ ಸಂಪುಟ ವಿಸ್ತರಣೆ ಸುಳಿವು ನೀಡುತ್ತಿದ್ದಂತೆ ಎಚ್ಚರಗೊಂಡ ವಸತಿ ಸಚಿವ ವಿ.ಸೋಮಣ್ಣ, ಸಂಪುಟದಲ್ಲಿ ನಾನು ಪ್ರೌಢ ಶಿಕ್ಷಣ ಖಾತೆ ಕೇಳಿದ್ದೆ. ಆದರೆ, ಮುಖ್ಯಮಂತ್ರಿಗಳು ನನಗೆ ವಸತಿ ಖಾತೆ ನೀಡಿದರು ಎಂದು ತಮ್ಮ ಮನೋಭಿಲಾಷೆ ಹೇಳಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.