ETV Bharat / state

ಕೆಎಸ್​ಆರ್​ಟಿಸಿ, ಬೈಕ್ ನಡುವೆ ಮುಖಾಮುಖಿ‌ ಡಿಕ್ಕಿ: ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ - bike and KSRTC bus accident

ಬೆಳಗಾವಿಯ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ‌ ಗ್ರಾಮದ ಬಳಿ ಬಸ್​ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ವ್ಯಕ್ತಿ ಸಾವಪ್ಪಿದ್ದಾನೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

collision-between-ksrtc-and-bike-one-dead-three-seriously-injured
ಕೆಎಸ್​ಆರ್​ಟಿಸಿ, ಬೈಕ್ ನಡುವೆ ಮುಖಾಮುಖಿ‌ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ
author img

By

Published : Jun 1, 2023, 6:04 PM IST

Updated : Jun 1, 2023, 7:08 PM IST

ಬೆಳಗಾವಿ: ಬೈಕ್ ಹಾಗೂ ಕೆಎಸ್ಆರ್​​ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್​​ ಸವಾರ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ‌ ಗ್ರಾಮದ ಬಳಿ ನಡೆದಿದೆ. ಯಲ್ಲಪ್ಪ ವಣ್ಣೂರ್ (25)​ ಅಪಘಾತದಲ್ಲಿ ಮೃತ ಪಟ್ಟವರು. ಒಂದೇ ಬೈಕ್​ನಲ್ಲಿ ಚಲಿಸುತ್ತಿದ್ದ ಪಲ್ಲವಿ ವಣ್ಣೂರ್​ (16), ಐಶ್ವರ್ಯಾ ವಣ್ಣೂರ್ (16)​, ಭೀಮಪ್ಪ ವಣ್ಣೂರ್ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಸಿಯಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದ ಕೆಎಸ್ಆರ್​ಟಿಸಿ ಬಸ್ ಹಾಗೂ ಕಡತನಬಾಗೇವಾಡಿ ಗ್ರಾಮದಿಂದ ಆಳ್ನಾವರ ಬಳಿಯ ಗೋಪೇನಟ್ಟಿಗೆ ಬರುತ್ತಿದ್ದ ಬೈಕ್ ನಡುವೆ ಗೊಲ್ಲಿಹಳ್ಳಿ ಬಳಿ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ಚಲಿಸುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡು ಒಂದು ಗಂಟೆ ನರಳಾಡಿದರೂ ಸಹ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್​​ ಬಾರದ ಹಿನ್ನೆಲೆ ಕಾರ್​​ನಲ್ಲಿ ನೋವಿನಿಂದ ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದ ಯಲಪ್ಪ ವಣ್ಣೂರ್​ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಒಂದು ಗಂಟೆ ತಡವಾಗಿ ಘಟನೆ ಸ್ಥಳಕ್ಕೆ ಆಂಬ್ಯುಲೆನ್ಸ್​​​ ಬಂದ ಮೇಲೆ ಉಳಿದ ಮೂವರು ಗಾಯಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೇ ತೀವ್ರವಾಗಿ ಗಾಯಗೊಂಡಿದ್ದ ಯಲ್ಲಪ್ಪ ವಣ್ಣೂರ್​ ಸಾವನ್ನಪ್ಪಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೊನ್ನೆಯಷ್ಟೇ ಮೃತ ಯಲ್ಲಪ್ಪ ಸಹೋದರನ ಮದುವೆ ಮುಗಿದಿತ್ತು. ಇಂದು ಅಳ್ನಾವರ ಬಳಿಯ ಗೋಪೇನಟ್ಟಿಗೆ ಒಂದೇ ಬೈಕ್ ಮೇಲೆ ಈ ನಾಲ್ವರು ಹೋಗುತ್ತಿದ್ದರು.

ಘಟನೆ ಕುರಿತು ಮೃತ ಯುವಕನ ಸಂಬಂಧಿಕ ಬಸಪ್ಪ ಗಂಗಪ್ಪ ವಣ್ಣೂರ ಮಾಧ್ಯಮಗಳ ಮಾತನಾಡಿ, "ಯಲ್ಲಪ್ಪ ಬೈಕ್ ಓಡಿಸುತ್ತಿದ್ದ. ಮದುವೆಗೆ ಬಂದಿದ್ದ ಆ ಎರಡು ಹೆಣ್ಣು ಮಕ್ಕಳನ್ನು ಗೋಪೇನಟ್ಟಿಗೆ ಕಳಿಸಲು ಯಲ್ಲಪ್ಪ ಮತ್ತು ಭೀಮಪ್ಪ ಹೋಗುತ್ತಿದ್ದರು. ಇವರೆಲ್ಲ ನಮ್ಮ ಸಂಬಂಧಿಕರೇ, ನಮ್ಮ ಊರಿನಿಂದ ಹತ್ತು‌ ಕಿ.ಮೀ ಅಂತರದಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಿದರು. ಘಟನಾ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಒಂದೇ ಬೈಕ್​ನಲ್ಲಿ ಈ ರೀತಿ ನಾಲ್ವರು ಸಂಚರಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ಸಂಭವಿಸಿದ ಭೀಕರ ಅಪಘಾತ : ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಕುರುಬೂರು ಗ್ರಾಮದ ಬಳಿಕ ಮೇ 29 ರಂದು ನಡೆದಿತ್ತು. ಮೃತರೆಲ್ಲರೂ ಬಳ್ಳಾರಿ ಜಿಲ್ಲೆಯವರಾಗಿದ್ದರು. ಮೂರು ಕುಟುಂಬಗಳ 12 ಸದಸ್ಯರು ಪ್ರವಾಸಕ್ಕೆಂದು ಮೈಸೂರಿಗೆ ಆಗಮಿಸಿದ್ದಾಗ ದುರಂತ ಸಂಭವಿಸಿತ್ತು.

ಇದನ್ನೂ ಓದಿ : ರಾಯಚೂರಲ್ಲಿ ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ-ಮಗ ಸಾವು, ಬೆಳಗಾವಿಯಲ್ಲಿ ಮಗನ ಸಾವಿನ ಬಳಿಕ ತಾಯಿಗೆ ಹೃದಯಾಘಾತ

Last Updated : Jun 1, 2023, 7:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.