ETV Bharat / state

ಬೀಮ್ಸ್ ಸಿಬ್ಬಂದಿ ಸೋಂಕಿತರ ಆರೈಕೆ ಮಾಡ್ತಿಲ್ಲ: ಸಂಬಂಧಿಕರ ಆಕ್ರೋಶ - ಬಿಮ್ಸ್

ಕೊರೊನಾ ರೋಗಿಗಳ ಆರೈಕೆಗೆ ಅವಕಾಶ ಕೊಡ್ತಿಲ್ಲ ಎಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ 50ಕ್ಕೂ ಹೆಚ್ಚು ಸಂಬಂಧಿಕರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

outrage of relatives
ಬೀಮ್ಸ್ ಬಳಿ ಸಂಬಂಧಿಕರ ಗಲಾಟೆ
author img

By

Published : Jun 1, 2021, 3:52 PM IST

ಬೆಳಗಾವಿ: ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೈಕೆಗೆ ಅವಕಾಶ ನೀಡುವಂತೆ ಸಂಬಂಧಿಕರು ಹೈಡ್ರಾಮಾ ನಡೆಸಿದ ಘಟನೆ ಬೀಮ್ಸ್ ಆವರಣದಲ್ಲಿ ನಡೆದಿದೆ.

ಬೀಮ್ಸ್ ಬಳಿ ಸಂಬಂಧಿಕರ ಗಲಾಟೆ

ಆಸ್ಪತ್ರೆ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಜೊತೆ ರೋಗಿಗಳ ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ಆಸ್ಪತ್ರೆಯೊಳಗೆ ರೋಗಿಗಳಿಗೆ ಸರಿಯಾಗಿ ಆರೈಕೆ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ಕೊಡಲ್ಲ. ಡೈಪರ್ ಚೇಂಜ್ ಮಾಡಲ್ಲ, ಆಕ್ಸಿಜನ್‌ ಬಗ್ಗೆ ಸರಿಯಾಗಿ ಮಾನಿಟರ್ ಮಾಡಲ್ಲ ಎಂದು ಆರೋಪಿಸಿದ್ದಾರೆ.

ಅಥಣಿ ತಾಲೂಕು ಅನಂತಪುರ ಗ್ರಾಮದ ಇಂದುಮತಿ ಮಾತನಾಡಿ, ವೃದ್ಧ ಪತಿ, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾಗಿ ಆರೈಕೆ ಮಾಡದೇ ಊಟದ ವ್ಯವಸ್ಥೆ ಮಾಡುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೀಮ್ಸ್ ಸಿಬ್ಬಂದಿ ನಿನ್ನೆಯಿಂದ ಆಸ್ಪತ್ರೆಗಳಲ್ಲಿದ್ದ ಸಂಬಂಧಿಕರಿಗೆ ಗೇಟ್ ಪಾಸ್ ನೀಡಿದೆ.
ಬಿಮ್ಸ್ ಕೋವಿಡ್ ವಾರ್ಡ್ ರೌಂಡ್ಸ್: ಸೋಂಕಿತರ ಜತೆಗಿದ್ದ ಸಹಾಯಕರಿಗೆ ಗೇಟ್ ಪಾಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.