ETV Bharat / state

ಚಳಿಗಾಲ ಅಧಿವೇಶನದ ವಿಧಾನಸಭೆ: 4 ವಿಧೇಯಕಗಳಿಗೆ ಒಪ್ಪಿಗೆ - ವಿಧೇಯಕಗಳಿಗೆ ಒಪ್ಪಿಗೆ

(ಕರ್ನಾಟಕ ತಿದ್ದುಪಡಿ)ಬಂಧಿಗಳ ಗುರುತಿಸುವಿಕೆ ವಿಧೇಯಕಕ್ಕೆ ವಿಧಾನಸಭೆ ತಾತ್ಕಾಲಿಕ ತಡೆ

Assembly House
ವಿಧಾನಸಭೆ ಸದನ
author img

By

Published : Dec 20, 2022, 4:37 PM IST

ಬೆಂಗಳೂರು/ ಬೆಳಗಾವಿ: ವಿಧಾನಸಭೆಯ ಮೊಗಶಾಲೆಯಲ್ಲಿ ನಾಲ್ಕು ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
2022ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು(ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ.

  • 2022ನೇ ಸಾಲಿನ ಕರ್ನಾಟಕ ಭೂಕಂದಾಯ ವಿಧೇಯಕ.(2ನೇ ತಿದ್ದುಪಡಿ)
  • 2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ.
  • 2022ನೇ ಸಾಲಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ ವಿಧೇಯಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ, ಮುರುಗೇಶ ನಿರಾಣಿ, ವಿ.ಸುನೀಲಕುಮಾರ್ ಅವರು ಮಂಡಿಸಿದರು. ನಂತರ ಅನುಮೋದನೆ ಪಡೆದುಕೊಳ್ಳಲಾಯಿತು.
    ವಿಧೇಯಕಕ್ಕೆ ತಡೆ : ಗೃಹ ಸಚಿವ ಅರಗ ಜ್ಞಾನೇಂದ್ರ ಅವರು 2021ನೇ ಸಾಲಿನ ಬಂಧಿಗಳ ಗುರುತಿಸುವಿಕೆ(ಕರ್ನಾಟಕ ತಿದ್ದುಪಡಿ) ವಿಧೇಯಕ ಹಿಂಪಡೆಯುವುದನ್ನು ಮಂಡಿಸಿರುವುದಕ್ಕೆ ವಿಧಾನಸಭೆ ತಾತ್ಕಾಲಿಕ ತಡೆ ನೀಡಿತು. ಈ ವಿಧೇಯಕ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಸ್ಪಷ್ಟತೆ ಬರಬೇಕಾದ ಕಾರಣ ತಡೆಹಿಡಿಯಲಾಗುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನಕ್ಕೆ ತಿಳಿಸಿದರು.

ಇದನ್ನೂಓದಿ:ರಮೇಶ್ ಜಾರಕಿಹೊಳಿ, ಈಶ್ವರಪ್ಪರ ಜೊತೆ ಸಂಪರ್ಕದಲ್ಲಿದ್ದೇನೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.