ETV Bharat / state

ಬೆಳಗಾವಿ; ಬಿಮ್ಸ್​ನ ಓರ್ವ ಸಿಬ್ಬಂದಿಗೆ ಕೊರೊನಾ.. ರೋಗಿಗಳು, ಸಿಬ್ಬಂದಿಗೆ ಆತಂಕ - ಬಿಮ್ಸ್ ಆಸ್ಪತ್ರೆ ಕೋವಿಡ್ ವಾರ್ಡ್‌

ಬಿಮ್ಸ್ ಆಸ್ಪತ್ರೆಯ ಓಪಿಡಿ ವಾರ್ಡ್ ಶಿಫ್ಟ್ ಮಾಡುವುದಾದರೆ ಯಾವ ಕಟ್ಟಡಕ್ಕೆ ಶಿಫ್ಟ್ ಮಾಡಬಹುದು ಎಂಬ ಬಗ್ಗೆ ವರದಿ ನೀಡುವಂತೆ ಡಿಹೆಚ್‌ಒ ಹಾಗೂ ಬಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ.

dsdsd
ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ,ಓಪಿಡಿ ವಾರ್ಡ್​ಗಳು ಒಂದೆ ಕಡೆ
author img

By

Published : Jul 11, 2020, 11:53 PM IST

ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಕೆಲಸ ಮಾಡಿ, ಬಳಿಕ ಓಪಿಡಿ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸಿದ್ದ 23 ವರ್ಷದ ಸಿಬ್ಬಂದಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಮೆಡಿಕಲ್ ವಾರ್ಡ್ ಸೀಲ್‌ಡೌನ್ ಮಾಡಲಾಗಿದೆ.

ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ,ಓಪಿಡಿ ವಾರ್ಡ್​ಗಳು ಒಂದೆ ಕಡೆ

ಸೋಂಕು ತಗುಲಿರುವ ಈ ವೈದ್ಯೆ ಮೆಡಿಕಲ್ ವಾರ್ಡ್‌ನಲ್ಲಿ ಇನ್ನೂರಕ್ಕೂ ಅಧಿಕ ಹೊರ ರೋಗಿಗಳ ತಪಾಸಣೆ ನಡೆಸಿದ್ದರು. ಹೀಗಾಗಿ ಇದೀಗ ಚಿಕಿತ್ಸೆ ಪಡೆದಿದ್ದ ರೋಗಿಗಳಿಗೆ ಹಾಗೂ ಜೊತೆಗೆ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿಗೆ ಆತಂಕ ಶುರುವಾಗಿದೆ. ವೈದ್ಯೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 15ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿದೆ‌‌.

ವೈದ್ಯೆ ವಾಸವಿದ್ದ ಸದಾಶಿವ ನಗರ ಪ್ರದೇಶದಲ್ಲಿ ಸೀಲ್​ಡೌನ್ ಮಾಡಲಾಗಿದೆ. ಆದರೆ ಈ ಪ್ರದೇಶದಲ್ಲಿ ಔಷಧಿ ಸಿಂಪಡಣೆ ಮಾಡದೇ ಮಹಾನಗರ ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಜೀವಭಯದಲ್ಲೇ ಓಪಿಡಿ ವಿಭಾಗದ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಹೊರರೋಗಿಗಳಿಗೂ ಆತಂಕ ಶುರುವಾಗಿದೆ. ಹೀಗಾಗಿ ಹೊರ ರೋಗಿಗಳ ವಿಭಾಗ ಬೇರೆಡೆ ಸ್ಥಳಾಂತರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಬಿಮ್ಸ್ ಆಸ್ಪತ್ರೆಯಲ್ಲಿ ಸದ್ಯ 315 ಬೆಡ್‌ಗಳನ್ನು ಕೋವಿಡ್ ವಾರ್ಡ್ ಸಲುವಾಗಿ ರಿಸರ್ವ್ ಇಡಲಾಗಿದೆ. ಸದ್ಯ 116 ಕೊರೊನಾ ಪಾಸಿಟಿವ್ ಆ್ಯಕ್ಟಿವ್ ಇರುವಂತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಓಪಿಡಿ ವಾರ್ಡ್​ನ ಮೇಲ್ಮಹಡಿಯ ಹೊಸ ಕಟ್ಟಡದಲ್ಲಿ 200 ಬೆಡ್​ಗಳಿದ್ದು ಅವುಗಳನ್ನು ಸಹ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನಾನೂ ಸಹ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೋವಿಡ್ ವಾರ್ಡ್‌ನಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಬಿಮ್ಸ್ ಆವರಣದ ಕಟ್ಟಡದಲ್ಲಿ ಮಾಡಲಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.