ಚಿಕ್ಕೋಡಿ : ಬಿಜೆಪಿ ಪಕ್ಷ ರಾಷ್ಟ್ರೀಯವಾದವನ್ನು ಹಿಡಿದು ಹೋಗುತ್ತಿದೆ. ಹೀಗಾಗಿ, ಬಿಜೆಪಿಯನ್ನು ತಾಲಿಬಾನ್ ಸಂಸ್ಕೃತಿಗೆ ಹೋಲಿಕೆ ಮಾಡೋದು ಸರಿಯಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ನಿಪ್ಪಾಣಿ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ತಾಲಿಬಾನ್ ಸಂಸ್ಕೃತಿ ಹೊಂದಿರೋರೆ ಇನ್ನೊಬ್ಬರ ಬಗ್ಗೆ ತಾಲಿಬಾನ್ ಅಂತಾ ಹೇಳಿದ್ರೆ ಅದಕ್ಕೇನೂ ಅರ್ಥ ಇರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟರು.
ತಾಲಿಬಾನ್ ಸಂಸ್ಕೃತಿ ಬಿಜೆಪಿ ಸಂಸ್ಕೃತಿ ಅಲ್ಲ,ಕಾಂಗ್ರೆಸ್ದು ತಾಲಿಬಾನ್ ಸಂಸ್ಕೃತಿ. ತಾಲಿಬಾನ್ಗೆ ಬೆಂಬಲ ವ್ಯಕ್ತಪಡಿಸಿದವರು ಯಾರು?ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟವರು ಯಾರು? ಕಾಶ್ಮೀರದ ಪರವಾಗಿ ವಾದ ಮಾಡಿರೋದು ಕಾಂಗ್ರೆಸ್?ಬಿಜೆಪಿನಾ? ಎಂದು ಪ್ರಶ್ನಿಸಿದ ಪಾಟೀಲ್, ಸಿದ್ದರಾಮಯ್ಯ ಆ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ ಎಂದರು.
ಸಿಂದಗಿ, ಹಾನಗಲ್ ಉಪಚುನಾವಣೆ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿಂದಗಿ ಮತ್ತು ಹಾನಗಲ್ ಬೈಎಲೆಕ್ಷನ್ ಅನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡ್ತೇವೆ. ಎರಡು ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪ್ರಜಾಪ್ರಭುತ್ವದಲ್ಲಿ ಯಾರಿಗೆ ನಂಬಿಕೆ ಇಲ್ವೋ ಅವರೆಲ್ಲ ತಾಲಿಬಾನಿ ಸಂಸ್ಕೃತಿಯವರು: ಸಿದ್ದರಾಮಯ್ಯ