ETV Bharat / state

ಭ್ರಷ್ಟಾಚಾರದ ಬಗ್ಗೆ ಡಿಸಿಗೆ ದೂರು ನೀಡಿದ್ದಕ್ಕೆ ಹಲ್ಲೆ: ಮನೆ ಮೇಲೆ ಕಲ್ಲು ತೂರಾಟ - Assault on a person for complaining to DC in belagavi

ಗ್ರಾಮದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿಯ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ.

ಡಿಸಿಗೆ ದೂರು ನೀಡಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

author img

By

Published : Feb 16, 2022, 7:00 AM IST

ಬೆಳಗಾವಿ: ಭ್ರಷ್ಟಾಚಾರದ ಬಗ್ಗೆ ಡಿಸಿಗೆ ದೂರು ನೀಡಿದ್ದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ, ಮಾಜಿ ಸದಸ್ಯರು ಮತ್ತು ಬೆಂಬಲಿಗರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ.

ಬೆಳಗಾವಿ ತಾಲೂಕಿನ ಬೋಡಕೇನಟ್ಟಿ ಗ್ರಾಮದ ಶೆಟ್ಟು ಕಾಳಪ್ಪ ನಾಯಕ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಶೆಟ್ಟು ಕಾಳಪ್ಪ ನಾಯಕ್ ಎಂಬಾತ ನೆರೆ ಸಂತ್ರಸ್ತರಿಗೆ ನೀಡಬೇಕಾದ ವಸತಿ ಯೋಜನೆಗಳ ಮನೆಗಳ ಹಂಚಿಕೆಯಲ್ಲಿ ಗೋಲ್‌ಮಾಲ್‌ ಆಗಿದೆ. ಮನೆ ಇದ್ದವರಿಗೂ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ ವಸತಿ ಮಂಜೂರು ಮಾಡಿಲ್ಲ. ಗ್ರಾಮ ಪಂಚಾಯತ್​ ಅಧ್ಯಕ್ಷ ಸೇರಿದಂತೆ ಹಲವರು ಹಣ ಪಡೆದು ವಸತಿ ಹಂಚಿಕೆ ಮಾಡಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಡಿಸಿಗೆ ದೂರು ನೀಡಿದ್ದರು‌.

ಡಿಸಿಗೆ ದೂರು ನೀಡಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

ಈ ವಿಚಾರ ಗೊತ್ತಾಗುತ್ತಿದ್ದಂತೆ ನಿನ್ನೆ ಬೆಳಗ್ಗೆ ನೂರಕ್ಕೂ ಅಧಿಕ ಜನರು ಶೆಟ್ಟು ನಾಯಕ್ ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಗ್ರಾ.ಪಂ ಅಧ್ಯಕ್ಷ ಸುರೇಶ್ ಜಾಧವ್, ಮಾಜಿ ಗ್ರಾಮ ಪಂಚಾಯತ್​ ಸದಸ್ಯ ನಾಗೇಶ್ ನಾಯಕ್, ಚನ್ನಪ್ಪ ನಾಯಕ್, ನಿಂಗಪ್ಪ.ಕ ನಾಯಕ್, ಜ್ಯೋತಿಬಾ ತವನೋಜಿ ಸೇರಿದಂತೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಶೆಟ್ಟು ನಾಯಕ ಆರೋಪಿಸಿದ್ದಾರೆ‌. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.