ETV Bharat / state

ನಾಳೆ ಬೆಳಗಾವಿ ಜಿಲ್ಲೆಗೆ ಅಮಿತ್ ಶಾ, ರಾಹುಲ್ ಗಾಂಧಿ, ಶಿವರಾಜಕುಮಾರ್... - ಈಟಿವಿ ಭಾರತ್ ಕನ್ನಡ ಸುದ್ದಿ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಳಗಾವಿಗೆ ನಾಳೆ ಅಮಿತ್ ಶಾ, ರಾಹುಲ್ ಗಾಂಧಿ ಹಾಗೂ ಶಿವರಾಜಕುಮಾರ್ ಅವರು ಆಗಮಿಸಲಿದ್ದಾರೆ.

ಅಮಿತ್ ಶಾ, ರಾಹುಲ್ ಗಾಂಧಿ, ಶಿವರಾಜಕುಮಾರ್
ಅಮಿತ್ ಶಾ, ರಾಹುಲ್ ಗಾಂಧಿ, ಶಿವರಾಜಕುಮಾರ್
author img

By

Published : May 5, 2023, 10:03 PM IST

ಬೆಳಗಾವಿ: 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಬಿಜೆಪಿ, ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಆಗಮಿಸಿ ಭಾಷಣ, ರೋಡ್ ಶೋಗಳ ಮೂಲಕ ಭರ್ಜರಿ ಮತಬೇಟೆ ನಡೆಸಲಿದ್ದಾರೆ. ಶನಿವಾರ ಬೆಳಗ್ಗೆ 10.30ಕ್ಕೆ ಸವದತ್ತಿ ಪಟ್ಟಣಕ್ಕೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಪರವಾಗಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ. ನಂತರ 12.10ಕ್ಕೆ ಅಥಣಿ ಪಟ್ಟಣದ ಭೋಜರಾಜ ಕಾಲೇಜು ಮೈದಾನದಲ್ಲಿ ಅಥಣಿ ಕ್ಷೇತ್ರದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

1.45ಕ್ಕೆ ರಾಯಭಾಗ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ದಿಗ್ಗೆವಾಡಿ ಕ್ರಾಸ್‌ವರೆಗೂ ರಾಯಬಾಗ ಕ್ಷೇತ್ರದ ಅಭ್ಯರ್ಥಿ ದುರ‍್ಯೋಧನ ಐಹೊಳೆ ಪರವಾಗಿ ಆಯೋಜಿಸಿರುವ ರೋಡ್ ಶೋನಲ್ಲಿ ಅಮಿತ್ ಶಾ ಭಾಗವಹಿಸಿ, ಮಧ್ಯಾಹ್ನ 3ಗಂಟೆಗೆ ಚಿಕ್ಕೋಡಿ ಪಟ್ಟಣದ ಆರ್.ಡಿ.ಕಾಲೇಜು ಮೈದಾನದಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭ್ಯರ್ಥಿ ರಮೇಶ್ ಕತ್ತಿ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.

ಸಂಜೆ 4. 20ಕ್ಕೆ ಯಮಕನಮರಡಿ ಗ್ರಾಮದಲ್ಲಿ ಯಮಕನಮರಡಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಪ್ರಚಾರ ಸಭೆಯಲ್ಲಿ, ಅಂತಿಮವಾಗಿ ಸಂಜೆ 5.45 ಕ್ಕೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಅಭ್ಯರ್ಥಿ ಡಾ ರವಿ ಪಾಟೀಲ್ ಪರವಾಗಿ ಆಯೋಜಿಸಿರುವ ರೋಡ್ ಶೋನಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ.

ಸತೀಶ್ ಜಾರಕಿಹೊಳಿ ಪರ ರಾಗಾ ಪ್ರಚಾರ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಎರಡನೇ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಶನಿವಾರ ಮಧ್ಯಾಹ್ನ 2ಕ್ಕೆ ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿ ಗ್ರಾಮದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಪರವಾಗಿ ಮತ್ತು ಸಂಜೆ 4 ಗಂಟೆಗೆ ಸದಲಗಾ ಗ್ರಾಮದಲ್ಲಿ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭ್ಯರ್ಥಿ ಗಣೇಶ್ ಹುಕ್ಕೇರಿ ಪರವಾಗಿ ಮತಬೇಟೆ ನಡೆಸಲಿದ್ದಾರೆ.

ಹೆಬ್ಬಾಳ್ಕರ್ ಪರ ನಟ ಶಿವರಾಜಕುಮಾರ ರೋಡ್ ಶೋ: ಬೆಳಗಾವಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಘಟಾನುಘಟಿ ರಾಜಕಾರಣಿಗಳ ಭೇಟಿ ಮಧ್ಯದಲ್ಲೆ ಚಿತ್ರನಟ ಡಾ ಶಿವರಾಜಕುಮಾರ್ ಕೂಡ ಶನಿವಾರ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಬಳಿಕ ಸಂಜೆ 4ಕ್ಕೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮಕ್ಕೆ ಆಗಮಿಸುವ ಶಿವರಾಜಕುಮಾರ ಅಲ್ಲಿನ ಲಕ್ಷ್ಮೀದೇವಿ ದರ್ಶನ ಪಡೆದು, ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ 7ಕ್ಕೆ ಹೊನ್ನಿಹಾಳ ಗ್ರಾಮದಲ್ಲಿ ರೋಡ್ ಶೋ ಕೂಡ ನಡೆಸಲಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ನಾಳೆ ಮೋದಿ ರೋಡ್ ಶೋ: 34 ರಸ್ತೆಗಳು ಬಂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.