ETV Bharat / state

ಬೆಳಗಾವಿ: ವಿಶ್ವ ವಿದ್ಯಾನಿಲಯಗಳ ವಿರುದ್ಧ ಎಬಿವಿಪಿ ಪ್ರತಿಭಟನೆ - Belagavi abvp protest news

ಮುಂಬರುವ ದಿನಗಳಲ್ಲಿ ಎಲ್ಲಾ ವಿವಿಗಳು ಯಾವ ಮಾನದಂಡದ ಮೇಲೆ ಪರೀಕ್ಷೆ ನಡೆಸುತ್ತಾರೆ ಎನ್ನುವುದನ್ನು ಸ್ಪಷ್ಟ ಪಡಿಸಬೇಕು. ಪರೀಕ್ಷೆ ನಡೆಸುವ ಬಗ್ಗೆ ಎಲ್ಲಾ ಪ್ರಾಚಾರ್ಯರಿಂದ ಸಲಹೆ ಪಡೆಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Protest
Protest
author img

By

Published : Oct 12, 2020, 3:43 PM IST

ಬೆಳಗಾವಿ: ಸರ್ಕಾರ ಮತ್ತು ವಿಶ್ವ ವಿದ್ಯಾನಿಲಯಗಳ ನಡುವಿನ ಸಮನ್ವಯತೆ ಕೊರತೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಅವರು, ಕೆಲವು ವಿಶ್ವವಿದ್ಯಾಲಯಗಳು ಪಠ್ಯಕ್ರಮವನ್ನು ಬದಲಾವಣೆ ಮಾಡಿದ್ದಾರೆ. ಆದ್ರೆ, ಬದಲಾವಣೆ ಪಠ್ಯಕ್ರಮ ಈವರೆಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಕೈಗೆ ಸೇರಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರ್ ಅಧ್ಯಯನ ಮಾಡಬೇಕೋ ಅಥವಾ ಈಗಿನ ಸೆಮಿಸ್ಟರ್ ಅಧ್ಯಯನ ಮಾಡಬೇಕೋ ಎನ್ನುವ ಗೊಂದಲದಲ್ಲಿದ್ದಾರೆ. ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ವಿಶ್ವವಿದ್ಯಾಲಯಗಳಿಂದ ಸ್ಪಷ್ಟವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿಲ್ಲ. ಯಾವ ರೀತಿ ಪರೀಕ್ಷೆ ನಡೆಸುತ್ತಾರೆ ಎನ್ನುವುದರ ಕುರಿತು ವಿವಿಯಲ್ಲಿಯೇ ಗೊಂದಲವಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ವಿವಿಗಳು ಯಾವ ಮಾನದಂಡದ ಮೇಲೆ ಪರೀಕ್ಷೆ ನಡೆಸುತ್ತಾರೆ ಎನ್ನುವುದನ್ನು ಸ್ಪಷ್ಟ ಪಡಿಸಬೇಕು. ಪರೀಕ್ಷೆ ನಡೆಸುವ ಬಗ್ಗೆ ಎಲ್ಲಾ ಪ್ರಾಚಾರ್ಯರಿಂದ ಸಲಹೆ ಪಡೆಬೇಕು. ಇದರ ಜೊತೆಗೆ ಅಕಾಡೆಮಿಕ್ ಕ್ಯಾಲೆಂಡರ್ ಬಿಡುಗಡೆ ಮಾಡುವವರೆಗೂ ವಿದ್ಯಾರ್ಥಿ ಹಾಗೂ ಶಿಕ್ಷಕರ ಮೇಲೆ ಒತ್ತಡ ಹಾಕಬಾರದು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.