ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬಮ್ಮಣ್ಣವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಉದ್ಯಮಿಯನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ನಗರದ ಗುರುಪ್ರಸಾದ ಕಾಲೋನಿಯಲ್ಲಿ ಮಾರ್ಚ್15 ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದ ಮಧು ಕಲ್ಲಂತ್ರಿ ಎಂಬವರನ್ನು ಬಂಧಿಸಲಾಗಿದೆ.
ಗುರುಪ್ರಸಾದ ಕಾಲೋನಿಯ ಗಣಪತಿ ಮಂದಿರದ ಬಳಿ ಬಸ್ತವಾಡ ಮೂಲದ ನಿವಾಸಿಯಾಗಿದ್ದ ರಾಜು ಮಲ್ಲಪ್ಪ ದೊಡ್ಡಬೊಮ್ಮಣ್ಣವರ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ವಿಚಾರಣೆ ವೇಳೆ ರಾಜು ದೊಡ್ಡ ಬೊಮ್ಮಣ್ಣವರ ಅವರ ಎರಡನೇ ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿತ್ತು. ಈ ಸಂಬಂಧ ಈಗಾಗಲೇ ಎರಡನೆಯ ಪತ್ನಿ ಸೇರಿದಂತೆ 9ಜನ ಆರೋಪಿಗಳನ್ನ ಬಂಧಿಸಲಾಗಿದೆ.
ಬಂಧಿತ ಆರೋಪಿಗಳಾದ ರಾಜು ಪತ್ನಿ ಕಿರಣಾ, ಧರಣೇಂದ್ರ ಗಂಟೆ, ಶಶಿಕಾಂತ್ ಪಾಟೀಲ್, ರಜಪೂತ್ ವಿಜಯ್ ಅವರನ್ನ ಈ ಮೊದಲೇ ಬಂಧಿಸಲಾಗಿತ್ತು. ರಾಜು ದೊಡ್ಡ ಬೊಮ್ಮಣ್ಣವರ ಮೂರು ಮದುವೆಯಾಗಿದ್ದನು. ಎರಡನೇ ಪತ್ನಿ ಹಾಗೂ ರಾಜು ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪವಿತ್ತೆಂದು ತಿಳಿದುಬಂದಿದೆ. ಎರಡನೆಯ ಪತ್ನಿ ಹಾಗೂ ರಾಜು ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪವಿದ್ದು, ಕಿರಣಾ ಪತಿಯ ಪಾರ್ಟ್ನರ್ಗಳಿಗೆ 10ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದಾಳೆ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇದೀಗ ಮಧು ಕಲ್ಲಂತ್ರಿಯನ್ನು ಬಂಧಿಸಲಾಗಿದ್ದು, ಈತ ಸಾಮಾಜಿಕ ಕಾರ್ಯಕರ್ತನಂತೆ ಗುರುತಿಸಿಕೊಂಡಿದ್ದನು. ಇದೀಗ ಪೊಲೀಸರಿಗೂ ಹತ್ತಿರವಾಗಿ ಓಡಾಡಿಕೊಂಡಿದ್ದ. ಕೆಲವು ವರ್ಷಗಳ ಹಿಂದೆ ಅನೇಕ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸಿ ಪೊಲೀಸರೊಂದಿಗೆ ರಾಜಿ ಮಾಡಿಸುವ ಕೆಲಸವನ್ನು ಮಾಡುತ್ತಿದ್ದನು. ಕೊಲೆಗಾರರಿಗೆ ಕೃತ್ಯವೆಸಗಲು ಪ್ರೋತ್ಸಾಹ ನೀಡಿದ್ದಲ್ಲದೆ ಸಾಕ್ಷಿ ನಾಶ ಮಾಡಲು ಯತ್ನಿಸಿರೋ ಆರೋಪ ಈತನ ಮೇಲಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ದಿಢೀರನೆ ಮದ್ಯ ಮಾರಾಟ ಬಂದ್?