ETV Bharat / state

ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ: 65 ವರ್ಷದ ಉದ್ಯಮಿಯಿಂದ 6 ಸಾವಿರ ಕಿಮೀ ಬೈಕ್ ರೈಡ್​ - ಹುಬ್ಬಳ್ಳಿ ಉದ್ಯಮಿ ಬೈಕ್​ ರೈಡ್​​

ಹುಬ್ಬಳ್ಳಿಯ ರೇಣುಕಾನಗರದ ನಿವಾಸಿ ಶಂಕರ ದೊಡ್ಡಮನಿ ಎಂಬ 65 ವರ್ಷದ ಉದ್ಯಮಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಸುಮಾರು ಆರು ಸಾವಿರ ಕಿ.ಮೀ ಬೈಕ್​ ರೈಡ್​​ ಮಾಡಲು ಮುಂದಾಗಿದ್ದಾರೆ.

65 Years old hubli businessman bike ride
65 ವರ್ಷದ ಹುಬ್ಬಳ್ಳಿ ಉದ್ಯಮಿಯಿಂದ ಬೈಕ್​ ರೈಡ್​
author img

By

Published : Dec 20, 2021, 7:28 PM IST

ಹುಬ್ಬಳ್ಳಿ: 65 ವರ್ಷದ ಉದ್ಯಮಿಯೊಬ್ಬರು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಸುಮಾರು ಆರು ಸಾವಿರ ಕಿ.ಮೀ ಬೈಕ್​ ರೈಡ್​​ ಮಾಡಲು ಮುಂದಾಗಿದ್ದಾರೆ.

65 ವರ್ಷದ ಹುಬ್ಬಳ್ಳಿ ಉದ್ಯಮಿಯಿಂದ ಬೈಕ್​ ರೈಡ್​

ಇಲ್ಲಿನ ರೇಣುಕಾನಗರದ ನಿವಾಸಿ ಶಂಕರ ದೊಡ್ಡಮನಿ ಎಂಬುವವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಬೈಕ್​ ರೈಡಿಂಗ್​​ ಅನ್ನು ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಇವರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ 6 ಸಾವಿರ ಕಿಮೀ ಬೈಕ್​ ರೈಡ್​ ಹಮ್ಮಿಕೊಂಡಿದ್ದು, ಬೆಳಗಾವಿ ಮಾರ್ಗವಾಗಿ ಮುಂಬೈ, ದೆಹಲಿ, ಕೋಲ್ಕತಾ, ಮದ್ರಾಸ್, ಪ್ರಯಾಣ ಬೆಳೆಸಿದ್ದಾರೆ. ಸುಮಾರು ಎಂಟು ದಿನಗಳ ಕಾಲದವರೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣಿಸಲಿದ್ದಾರೆ.

ಇವರು ತಮ್ಮ ಸಂಚಾರದಲ್ಲಿ ಮಾಜಿ ಪ್ರಧಾನಿ ಅಟಲ್​​ ಜೀ ಅವರು ಆಡಳಿತ ಸಮಯದಲ್ಲಿ ಮಾಡಿದಂತಹ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವಂತಹ ಉದ್ದೇಶವನ್ನು ಹೊಂದಿದ್ದಾರೆ. ಇವರ ಪ್ರಯಾಣಕ್ಕೆ ಎಸಿಪಿ ವಿನೋದ ಮುಕ್ತೆದಾರ, ಪೂರ್ವ ಸಂಚಾರ ಪೊಲೀಸ್ ಠಾಣೆ ಇನ್ಸ್​​​​ಪೆಕ್ಟರ್​​​​ ಎನ್. ಕಾಡದೇವರಮಠ ಅವರು ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು.

ಇದನ್ನೂ ಓದಿ: ಬೆಳಗಾವಿಯ ಅಧಿವೇಶನದಲ್ಲಿ ನಾಳೆಯೇ ಮತಾಂತರ ನಿಷೇಧ ಕಾಯ್ದೆ ಮಂಡನೆ : ಸಚಿವ ಸಂಪುಟ ತೀರ್ಮಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.