ಬೆಂಗಳೂರು: ನಾಡಹಬ್ಬ ದಸರಾ ಸಮೀಪಿಸುತ್ತಿರುವ ಹಿನ್ನೆಲೆ ರಾಜಮನೆತನ ದಸರಾ ಹಬ್ಬದ ತಯಾರಿಯಲ್ಲಿ ತೊಡಗಿದೆ. ಹಿಂದಿನಿಂದಲೂ ನಡೆದು ಬಂದ ರೀತಿಯಲ್ಲೇ ರಾಜಮನೆತನದ ಶಾಸ್ತ್ರ ಸಂಪ್ರದಾಯದಂತೆ ಈ ಬಾರಿಯೂ ದಸರಾ ಹಬ್ಬ ನಡೆಯಲಿದೆ ಎಂದು ರಾಜವಂಶಸ್ಥ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಹಬ್ಬದ ಆಚರಣೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಮನೆಯಿಂದ ಅಗತ್ಯದ ನೆರವು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಸದ್ಯದ ರಾಜ್ಯದ ಪರಿಸ್ಥಿತಿ ನೋಡಿದರೆ ತುಂಬಾ ಬೇಸರವಾಗುತ್ತೆ. ಜನರಿಗೆ ಅಗತ್ಯ ನೆರವನ್ನು ಎಲ್ಲರೂ ನೀಡಬೇಕಾಗಿದೆ. ಸರ್ಕಾರದ ಸರಳ ದಸರಾ ನಿರ್ಧಾರವು ಮಗಳಿಂದ ತಿಳಿದುಬಂದಿದೆ. ಈ ರೀತಿಯ ಸಂದರ್ಭದಲ್ಲಿ ಅದ್ಧೂರಿ ದಸರಾ ಮಾಡುವ ಬದಲು ಸರಳ ರೀತಿಯ ದಸರಾ ಆಚರಣೆಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅದು ಸೂಕ್ತವಾದ ನಿರ್ಧಾರ ಎಂದು ಯದುವೀರ್ ತಿಳಿಸಿದರು.