ಬೆಂಗಳೂರು: ಒಡವೆ ನೀಡಲು ನಿರಾಕರಿಸಿದ್ದಕ್ಕೆ ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಿಸಿಹೆಚ್ 1ನೇ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2011ರಲ್ಲಿ ಶಿವಲಿಂಗೇಗೌಡ ಎಂಬಾತ ತಮಿಳುನಾಡಿನ ಕನ್ಯಾಕುಮಾರಿಯಿಂದ ಸುಕನ್ಯಾ ಎಂಬ ಮಹಿಳೆಯನ್ನು ತನ್ನೊಟ್ಟಿಗೆ ಕರೆದುಕೊಂಡು ಬಂದಿದ್ದ. ಹೋಟೆಲ್ ಇಟ್ಟುಕೊಂಡಿದ್ದ ಈತ ಸುಕನ್ಯಾರನ್ನ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಆಕೆಯ ಮೈ ಮೇಲಿದ್ದ ಒಡವೆ ನೀಡುವಂತೆ ಹೇಳಿದ್ದ ಈತ, ಅವಳು ಒಪ್ಪದಿದ್ದಾಗ ವಿಹಾರಕ್ಕೆಂದು ಕರೆದುಕೊಂಡು ಹೋಗಿ ಆಕೆಯ ಕತ್ತು ಕೊಯ್ದು ಕೊಲೆಗೈದು ಚಿನ್ನದ ಒಡವೆ ದೋಚಿದ್ದ.
ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ 302ರ ಅಡಿ ಪ್ರಕರಣ ದಾಖಲಾಗಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ, ಜೀವವಾಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.