ಬೆಂಗಳೂರು: ಹಾಲು, ಮೊಸರಿನ ದರವನ್ನು 3 ರೂಪಾಯಿ ಏರಿಕೆ ಮಾಡಲು ಮುಂದಾಗಿ ನಂತರ ಸರ್ಕಾರ ತಡೆ ಹಿಡಿದಿರುವ ಬೆನ್ನಲ್ಲೇ ನೀರಿನ ಶುಲ್ಕವೂ ಏರಿಕೆಯಾಗುವ ಸುಳಿವು ಸಿಕ್ಕಿದೆ. ಬೇಳೆ, ಕಾಳು, ಅಡುಗೆ ಎಣ್ಣೆ ಹೀಗೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೀರಿನ ಶುಲ್ಕವೂ ಏರಿಕೆಯಾದಲ್ಲಿ ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದೆ. ಇದೀಗ ಜಲಮಂಡಳಿ ಪ್ರತೀ ವರ್ಷ ನೀರಿನ ಶುಲ್ಕ ಏರಿಕೆಗೆ ಅನುಮತಿ ಕೇಳಿ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಲಮಂಡಳಿ ಮುಖ್ಯ ಅಭಿಯಂತರ ಸುರೇಶ್, '2014ರ ಬಳಿಕ ನೀರಿನ ದರದಲ್ಲಿ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಮಂಡಳಿಗೆ ಸಾಕಷ್ಟು ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದೇವೆ' ಎಂದರು.
ಇದನ್ನೂ ಓದಿ: ನಂದಿನಿ ಹಾಲು, ಮೊಸರಿನ ದರ ಏರಿಕೆ ವಿಚಾರ: ನ. 20ರ ನಂತರ ತೀರ್ಮಾನ ಎಂದ ಸಿಎಂ