ETV Bharat / state

ಲೋಕಸಭಾ ಚುನಾವಣೆ: ರಾಜ್ಯದಲ್ಲಿನ ಮತದಾನ ಕೇಂದ್ರಗಳು, ವಿಶೇಷ ಸೌಲಭ್ಯದ ಮಾಹಿತಿ - ವಿಶೇಷ ಸೌಲಭ್ಯ

ಈಗಾಗಲೇ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟಿಸಲಾಗಿದೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿಯನ್ನು ಚುನಾವಣಾ ಆಯೋಗ ಮಾಡಿಕೊಳ್ಳುತ್ತಿದೆ.

ಲೋಕಸಭಾ ಚುನಾವಣೆ ಮತದಾನ
author img

By

Published : Mar 11, 2019, 11:20 AM IST

ಬೆಂಗಳೂರು: ರಾಜ್ಯದಲ್ಲಿ ಕಳೆದ ಲೋಕಸಭೆ ಚುನಾವಣೆ (2014) ಕ್ಕೆ ಹೋಲಿಸಿದರೆ ಈ ಬಾರಿ ಮತಗಟ್ಟೆಗಳ ಸಂಖ್ಯೆ ಶೇ.7ರಷ್ಟು ಹೆಚ್ಚಾಗಿದೆ. ಜೊತೆಗೆ ಹಲವಾರು ಸೌಲಭ್ಯಗಳು ಹಾಗೂ ನಿಯಮಗಳನ್ನು ಕೈಗೊಳ್ಳಲಾಗಿದೆ.

2014ರಲ್ಲಿ ಮತಗಟ್ಟೆಗಳ ಸಂಖ್ಯೆ 54,265 ಇತ್ತು. ಅದು ಈಗ 58,186 ಆಗಿದ್ದು, ಶೇ. 7ರಷ್ಟು ಹೆಚ್ಚಳವಾಗಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಚುನಾವಣಾ ಆಯೋಗವು ಮತದಾನ ಕೇಂದ್ರಗಳಲ್ಲಿ ಸೌಲಭ್ಯಗಳ ಸ್ಥಿತಿಯನ್ನು ಸುಧಾರಿಸಲು ಹಿಂದಿನ ಪರಿಕಲ್ಪನೆಯಾದ ಮೂಲ ಕನಿಷ್ಠ ಸೌಲಭ್ಯಗಳ ಬದಲಿಗೆ ಖಚಿತ ಕನಿಷ್ಠ ಸೌಲಭ್ಯಗಳನ್ನಾಗಿ ಮೇಲ್ದರ್ಜೆಗೇರಿಸಿದೆ. ಅದರಂತೆ ಮತದಾರರ ಅನುಕೂಲಕ್ಕಾಗಿ ಖಚಿತ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಶೆಡ್, ಶೌಚಾಲಯ, ವಿಶೇಷ ಚೇತನ ಮತದಾರರಿಗೆ ರ್ಯಾಂಪ್ ಸೌಲಭ್ಯ, ಮತದಾನಕ್ಕೆ ಉತ್ತಮ ಗುಣಮಟ್ಟದ ವೋಟಿಂಗ್ ಕಂಪಾರ್ಟ್‍ಮೆಂಟ್ ಇತ್ಯಾದಿಗಳನ್ನು ಪ್ರತಿಯೊಂದು ಮತದಾನ ಕೇಂದ್ರವು ಹೊಂದುವಂತೆ ಖಾತ್ರಿ ಪಡಿಸುವುದನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಶೇಷ ಚೇತನರಿಗೆ ಸೌಲಭ್ಯ:

ಎಲ್ಲಾ ಮತಗಟ್ಟೆಗಳು ನೆಲ ಮಹಡಿಯಲ್ಲಿಯೇ ಇರಬೇಕು ಮತ್ತು ವಿಶೇಷ ಚೇತನರ ಅನುಕೂಲಕ್ಕಾಗಿ ವ್ಹೀಲ್​ ಚೇರ್​ನೊಂದಿಗೆ ಗಟ್ಟಿಮುಟ್ಟಾದ ರ್ಯಾಂಪ್‍ಗಳನ್ನು ಒದಗಿಸಬೇಕು, ಸಂಜ್ಞೆ ಮೂಲಕ ಅರ್ಥೈಸುವರನ್ನು ಒದಗಿಸಬೇಕು ಮತ್ತು ಮನೆಯಿಂದ ಮತಗಟ್ಟೆಗೆ ಹಾಗೂ ಮತಗಟ್ಟೆಯಿಂದ ಮನೆಗೆ ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಸೂಚನೆಗಳನ್ನು ಆಯೋಗವು ನೀಡಿದೆ.

ಇದಲ್ಲದೆ, ವಿಶೇಷ ಚೇತನರಿಗೆ ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ಆಯೋಗವು ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲಾ ವಿಶೇಷ ಚೇತನರನ್ನು ಸಂಬಂಧಪಟ್ಟ ಮತಗಟ್ಟೆಗಳೊಂದಿಗೆ ಗುರುತಿಸಿ ಮ್ಯಾಪ್ ಮಾಡಲು ತಿಳಿಸಿದೆ. ಮತ್ತು ಮತದಾನ ದಿನದಂದು ಮತದಾನದ ಅನುಭವವು ಉತ್ತಮವಾಗಿರುವಂತೆ ವಿಶೇಷ ಚೇತನರಿಗೆ ಅವಶ್ಯವಿರುವ ನಿರ್ದಿಷ್ಟ ವ್ಯವಸ್ಥೆಗಳನ್ನು ಮಾಡಲು ಆಯೋಗವು ನಿರ್ದೇಶನ ನೀಡಿದೆ.

ಸಹಾಯ ಮಾಡಬೇಕು:

ಚುನಾವಣಾಧಿಕಾರಿ/ಜಿಲ್ಲಾ ಚುಣಾವಣಾಧಿಕಾರಿಗಳಿಂದ ನೇಮಿಸಲ್ಪಟ್ಟ ಸ್ವಯಂ ಸೇವಕರು ಗುರುತಿಸಲಾದ ವಿಶೇಷ ಚೇತನರಿಗೆ ಸಹಾಯ ಮಾಡುವವುದು. ಮತಗಟ್ಟೆಗಳಲ್ಲಿ ಅವರಿಗೆ ನಿರ್ದಿಷ್ಟ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ, ವಿಶೇಷ ಚೇತನ ಮತದಾರರಿಗೆ ಮತಗಟ್ಟೆಗಳನ್ನು ಪ್ರವೇಶಿಸಲು ಆದ್ಯತೆ ನೀಡಲು ನಿರ್ದೇಶಿಸಲಾಗಿದೆ. ಮತ್ತು ಮತಗಟ್ಟೆಯ ಆವರಣದ ಪ್ರವೇಶದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಒದಗಿಸಲಾಗುವುದು ಮತ್ತು ಮಾತು ಮತ್ತು ಶ್ರವಣದೋಷ ಇರುವವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು.

ವಿಶೇಷ ಚೇತನರಿಗೆ ಬೇಕಾದ ನಿರ್ದಿಷ್ಟ ಬೇಡಿಕೆಗಳ ಕುರಿತು ಮತಗಟ್ಟೆಯ ಸಿಬ್ಬಂದಿಗೆ ತಿಳುವಳಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಒತ್ತು ಕೊಡಲಾಗುತ್ತೆ. ಮತದಾನಕ್ಕೆ ಸಹಾಯ ಮಾಡಲಿದ್ದಾರೆ. ವಿಶೇಷ ಚೇತನ ಮತದಾನಕ್ಕೆ ಮತಗಟ್ಟೆಗಳಲ್ಲಿ ವಿಶೇಷವಾದ ಅನುಕೂಲತೆಗಳನ್ನು ಕೂಡಾ ಮಾಡಲಾಗುವುದು. ಅಲ್ಲದೆ, ವಿಶೇಷ ಚೇತನರು ಮತಗಟ್ಟೆಗಳಲ್ಲಿ ಒಳಬರಲು ಆದ್ಯತೆ ನೀಡಲಾಗುವುದು ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ಚೇತನರು ತಮ್ಮ ವಾಹನಗಳನ್ನು ನಿಲ್ಲಿಸಲೂ ಕೂಡಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ ಮೂಗ ಮತ್ತು ಕಿವುಡರಿಗೆ ವಿಶೇಷ ಒತ್ತು ನೀಡಲಾಗುವುದು. ಅವರಿಗೆ ಅಗತ್ಯವಾಗಿ ಬೇಕಾಗಿರುವ ಸೂಕ್ಷ್ಮ ಸಂವೇದನೆಗಳ ಬಗ್ಗೆ ಗಮನ ಹರಿಸಲು ಮತಗಟ್ಟೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ.

ಮತದಾರರ ಸಹಾಯವಾಣಿ:

ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1950 ದೇಶದ ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲೂ ಸಕ್ರಿಯವಾಗಿದೆ. ಚುನಾವಣೆಗೆ ಬೇಕಾಗಿರುವಂತಹ ಎಲ್ಲಾ ಮಾಹಿತಿಗಳು, ಫೀಡ್ ಬ್ಯಾಕ್, ಸಲಹೆಗಳು ಮತ್ತು ದೂರುಗಳನ್ನು ಇಲ್ಲಿ ನೊಂದಾಯಿಸಬಹುದಾಗಿದೆ. ಈ ಕರೆಯು ಉಚಿತವಾಗಿರಲಿದ್ದು ದೇಶದ ಯಾವುದೇ ಭಾಗದಿಂದಲೂ ಕರೆಯನ್ನು ಮಾಡಬಹುದಾಗಿದೆ.

ಇನ್ನು ಸುವಿಧ ಹೆಸರಿನಲ್ಲಿ ಏಕಗವಾಕ್ಷಿ ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. 24 ಗಂಟೆಯಲ್ಲಿ ಚುನಾವಣೆಗೆ ಬೇಕಾಗಿರುವ ಎಲ್ಲಾ ರೀತಿಯ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ ಅನುಮತಿ ನೀಡುವ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಒಂದೇ ಕಡೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು - ಸಭೆ, ರ್ಯಾಲಿಗಳು, ವಾಹನಗಳು, ತಾತ್ಕಾಲಿಕ ಚುನಾವಣಾ ಕಚೇರಿಗಳು, ಲೌಡ್ ಸ್ಪೀಕರ್​ಗಳಿಗೆ ಬೇಕಾಗಿರುವ ಅನುಮತಿಯನ್ನು ಇಲ್ಲಿ ಪಡೆಯಬಹುದಾಗಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಇಲಾಖೆಗಳನ್ನು ಸಮನ್ವಯಗೊಳಿಸುವ ಮೂಲಕ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯನ್ನು ಎಲ್ಲಾ ಸಬ್ ಡಿವಿಸನ್ ಗಳ ರಿಟರ್ನಿಂಗ್ ಅಧಿಕಾರಿಗಳ ಮಟ್ಟದಲ್ಲಿ ರೂಪಿಸಲಾಗುವುದು. ಈ ವ್ಯವಸ್ಥೆಯಲ್ಲಿ ಒಂದೇ ಕಡೆ ಅರ್ಜಿ ಸಲ್ಲಿಸಬಹುದಾಗಿದೆ.

ದೂರು ನೀಡಿ:

ಯಾವುದೇ ವ್ಯಕ್ತಿ ಕಾನೂನು ಬಾಹಿರ ಚಟುವಟಿಕೆ, ಅಕ್ರಮ, ಆಮಿಷ ತೋರಿಸೋದು ಕಂಡು ಬಂದರೆ ಯಾವುದೇ ನಾಗರಿಕರು ವಿಶೇಷ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಬಹುದು. “ಸಿ – ವಿಜಿಲ್’ ಮೊಬೈಲ್ ಅಪ್ಲಿಕೇಶನ್ ಮೂಲಕ ಆಮಿಷದ ವಿಡಿಯೋ , ಫೋಟೋ ಕಳಿಸಬಹುದು. ಇದರ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.