ETV Bharat / state

ಡಾ. ರಾಜ್​ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸಿದ್ದ ಹಿರಿಯ ನಟ ಅಶ್ವತ್ಥ ನಾರಾಯಣ ಇನ್ನಿಲ್ಲ - Veteran actor Ashwaththa Narayana died

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ಅಶ್ವಥ್ ನಾರಾಯಣ ವಿಧಿವಶರಾಗಿದ್ದಾರೆ. ವರನಟ ಡಾ. ರಾಜ್‌ ಕುಮಾರ್ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸುವ ಮೂಲಕ ವಿಶಿಷ್ಟ ನಟ ಎಂಬ ಬಿರುದಿಗೆ ಪಾತ್ರರಾಗಿದ್ದರು.

Veteran actor Ashwaththa Narayana died
ನಟ ಅಶ್ವತ್ಥ ನಾರಾಯಣ ಇನ್ನಿಲ್ಲ
author img

By

Published : Feb 7, 2022, 6:34 AM IST

Updated : Feb 7, 2022, 8:12 PM IST

ಬೆಂಗಳೂರು: ಸ್ಯಾಂಡಲ್​​​ವುಡ್​​ನ ಹಿರಿಯ ನಟ ಅಶ್ವತ್ಥ ನಾರಾಯಣ (82) ಭಾನುವಾರ ಮೃತಪಟ್ಟಿದ್ದಾರೆ.

ಕೆಲ ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವರನಟ ಡಾ. ರಾಜ್‌ ಕುಮಾರ್ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸುವ ಮೂಲಕ ವಿಶಿಷ್ಟ ನಟ ಎಂಬ ಬಿರುದಿಗೆ ಪಾತ್ರರಾಗಿದ್ದರು.

ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ನೈಟಿಂಗೇಲ್​ ಆಫ್​ ಇಂಡಿಯಾ

ವರನಟ ಡಾ. ರಾಜ್‌ ಕುಮಾರ್ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯರೊಂದಿಗೆ ನಾಟಕಗಳಲ್ಲಿ ಅಶ್ವತ್ಥ ನಾರಾಯಣ ಬಾಲನಟನಾಗಿ ಅಭಿನಯಿಸಿದ್ದರು. ನಂತರ ಡಾ.ರಾಜ್‌ ಅಭಿನಯದ ಬಹುತೇಕ ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ರಾಜ್ ಅವರ ಮೂವರು ಪುತ್ರರ ಚಿತ್ರಗಳಲ್ಲೂ ಇವರು ಬಣ್ಣ ಹಚ್ಚಿದ್ದರು.

ಅಷ್ಟೇ ಅಲ್ಲ ರಾಘವೇಂದ್ರ ರಾಜಕುಮಾರ್‌ ಅವರ ಪುತ್ರ ವಿನಯ್‌ ರಾಜ್‌ ಕುಮಾರ್ ಅಭಿನಯದ 'ಸಿದ್ದಾರ್ಥ' ಚಿತ್ರದಲ್ಲಿಯೂ ಇವರು ಅಭಿನಯಿಸಿದ್ದರು.

Last Updated : Feb 7, 2022, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.