ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಹಿನ್ನೆಲೆಯಲ್ಲಿ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ವತಿಯಿಂದ 10,000 ಸೇಫ್ಟಿ ಕಿಟ್ಗಳನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಹಸ್ತಾಂತರಿಸಲಾಯಿತು.
ಇನ್ನು ಮಲ್ಲೇಶ್ವರಂನ ಶಾಸಕರ ಕಚೇರಿಯಲ್ಲಿ ಕಿಟ್ ಹಸ್ತಾಂತರ ಬಳಿಕ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಲಾಕ್ ಡೌನ್ ಮುಂದುವರೆಸಬೇಕಾ, ಬೇಡವಾ? ಎಂಬ ಪ್ರಶ್ನೆಗೆ ಲಾಕ್ ಡೌನ್ ಎನ್ನುವುದು ಪರಿಸ್ಥಿತಿಯ ಮೇಲೆ ಅವಲಂಬಿಸಿದೆ. ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿರೋ ಪ್ರದೇಶಗಳಲ್ಲಿ ಲಾಕ್ ಡೌನ್ ಇನ್ನಷ್ಟು ಬಿಗಿಯಾಗಲಿದೆ. ಕಡಿಮೆ ಇರೋ ಪ್ರದೇಶಗಳಲ್ಲಿ ಸಡಿಲವಾಗಲಿದೆ ಎಂದು ಲಾಕ್ಡೌನ್ ವಿಸ್ತರಣೆಯಾಗುವ ಸುಳಿ ನೀಡಿದರು.
ಇದೇ ಸಂದರ್ಭದಲ್ಲಿ ಇವರು ಮಾಸ್ಕ್ ಧರಿಸುವುದು ಇವತ್ತಿನದಲ್ಲ ಹಿಂದಿನ ಕಾಲದಿಂದಲೂ ಬಂದಂತಹ ಪದ್ದತಿ ವೈರಾಣು ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು ಸಹಕಾರಿ. ಮಾಸ್ಕ್ ಧರಿಸಿ ಸೇಫ್ ಆಗಿರಿ ಎಂದು ಡಿಸಿಎಂ ಹೇಳಿದರು.