ETV Bharat / state

ಬೆಂಗಳೂರಿನ ದಂಪತಿಯಲ್ಲಿ ಪತ್ತೆಯಾಯ್ತು ಕೊರೊನಾ: ರಾಜ್ಯದಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ - ಕೊರೊನಾ ಕರ್ನಾಟಕ

ರಾಜ್ಯದಲ್ಲಿ ಹೊಸದಾಗಿ ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನ ದಂಪತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 146ಕ್ಕೆ ಏರಿಕೆಯಾಗಿದೆ.

corona
ಕೊರೊನಾ
author img

By

Published : Apr 5, 2020, 3:41 PM IST

Updated : Apr 5, 2020, 4:18 PM IST

ಬೆಂಗಳೂರು: ರಾಜ್ಯದಲ್ಲಿ ಎರಡು ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನ ಮಡಿವಾಳ ಮೂಲದ ಪತಿ, ಪತ್ನಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಪತಿಗೆ 68 ವರ್ಷ ವಯಸ್ಸಾಗಿದ್ದು, ಪತ್ನಿಗೆ 62 ವರ್ಷ ವಯಸ್ಸಾಗಿದೆ.

ಮಾರ್ಚ್​ 22ರಂದು ದಂಪತಿ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆ ತನ್ನ ಹೆಲ್ತ್​ ಬುಲೆಟಿನ್​​ನಿಂದ ಸ್ಪಷ್ಟಪಡಿಸಿದೆ. ಇದರಿಂದ ರಾಜ್ಯದಲ್ಲಿ 144 ಇದ್ದ ಕೊರೊನಾ ಪೀಡಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

Last Updated : Apr 5, 2020, 4:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.