ETV Bharat / state

ಐಐಎಸ್​ಸಿಯಲ್ಲಿ ಒಂದೇ ದಿನ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

author img

By

Published : Mar 3, 2021, 5:24 PM IST

Updated : Mar 3, 2021, 8:10 PM IST

Two students dies in IISC
ಐಐಎಸ್​ಸಿಯಲ್ಲಿ ವಿದ್ಯಾರ್ಥಿಗಳ ದುರ್ಮರಣ

17:19 March 03

ಐಐಎಸ್​ಸಿಯಲ್ಲಿ ಒಂದೇ ದಿನ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್(ಐಐಎಸ್ಸಿ)​​ನಲ್ಲಿ ಮಾರ್ಚ್ 2 ರಂದು ಇಬ್ಬರು ವಿದ್ಯಾರ್ಥಿಗಳ ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ.

ಪಿಹೆಚ್​ಡಿ ವಿದ್ಯಾರ್ಥಿ ರಣಧೀರ ಕುಮಾರ್ (36) ನೇಣಿಗೆ ಶರಣಾಗಿದ್ದು, ಮತ್ತೋರ್ವ ಎಂಟೆಕ್ ವಿದ್ಯಾರ್ಥಿ ರಾಹುಲ್ ಪ್ರತಾಪ್ (31) ಸಂಜೆ ಫುಟ್ಬಾಲ್ ಅಭ್ಯಾಸ ಮಾಡುವ ಸಂದರ್ಭ ಸಾವಿಗೀಡಾಗಿದ್ದಾರೆ.

ನ್ಯಾನೋ ವಿಜ್ಞಾನ ಹಾಗೂ ಇಂಜಿನಿಯರಿಂಗ್ ಕುರಿತು ಪಿಹೆಚ್​ಡಿ ಮಾಡುತ್ತಿದ್ದ ರಣಧೀರ ಕುಮಾರ್ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು​ ಆತ್ಮಹತ್ಯೆ ಮಾಡಿಕೊಂಡರೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಎಂಟೆಕ್ ವಿದ್ಯಾರ್ಥಿ ರಾಹುಲ್ ಪ್ರತಾಪ್ ಜಿಮ್ಖಾನ ಮೈದಾನದಲ್ಲಿ ಫುಟ್ಬಾಲ್ ಆಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆತನನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. 

ಇದನ್ನೂ ಓದಿ: ನಾಪತ್ತೆಯಾದ ಯುವತಿ ಕಾಡಿನಲ್ಲಿ ಶವವಾಗಿ ಪತ್ತೆ

ಆತ್ಮಹತ್ಯೆಗೆ ಶರಣಾದ ರಣಧೀರನ ಬಗ್ಗೆ ಆತನ ಸಹಪಾಠಿಗಳು ಹೇಳುವ ಪ್ರಕಾರ, ಮಾರ್ಚ್​ 2 ರಂದು ಮಂಗಳವಾರ ಸಂಜೆಯವರೆಗೂ ಆತನ ರೂಮ್ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ, ನಾವು ರಕ್ಷಣಾ ಸಿಬ್ಬಂದಿಗೆ ವಿಷಯ ತಿಳಿಸಿದ್ದೆವು. ಅವರು ಬಂದು ಬಾಗಿಲು ತೆಗೆದಾಗ ನೇಣು ಬಿಗಿದುಕೊಂಡು ರಣಧೀರ ಸಾವಿಗೆ ಶರಣಾಗಿದ್ದ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದಿದ್ದಾರೆ.

ಐಐಎಸ್​ಸಿ ಮೃತಪಟ್ಟ ವಿದ್ಯಾರ್ಥಿಗಳ ಮಾಹಿತಿಗಳನ್ನು CeNSE ವೆಬ್​ಸೈಟ್​ನಿಂದ ತೆಗೆದು ಹಾಕಿದ್ದು, ವಿದ್ಯಾರ್ಥಿಗಳ ಪೋಷಕರ ಹೆಸರು, ವ್ಯಾಸಂಗ ವಿಭಾಗ ಹಾಗೂ ಇತರೆ ಮಾಹಿತಿಗಳು ಇದರಲ್ಲಿ ದಾಖಲಾಗಿರುತ್ತದೆ.

ಘಟನೆಯ ಬಗ್ಗೆ ಐಐಎಸ್​ಸಿಯ ಉನ್ನತಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದು, ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಐಐಎಸ್​ಸಿಯ ವಿದ್ಯಾರ್ಥಿಗಳು ಮಾನಸಿಕ ಅಥವಾ ಯಾವುದೇ ಸಮಸ್ಯೆ ಇದ್ದರೆ ಐಐಎಸ್​ಸಿಯ ಸೌಕರ್ಯ ಬಳಕೆ ಮಾಡಿ ಸಹಾಯ ಪಡೆಯಬೇಕು ಎಂದು ಸೂಚಿಸಿದೆ.

Last Updated : Mar 3, 2021, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.