ETV Bharat / state

ಪಾತ್ರೆ ತೊಳೆಯಲು ಹೋಗಿ ನೀರುಪಾಲಾದ ಇಬ್ಬರು ಮಕ್ಕಳು! - ಹೊಸಕೋಟೆ ಸುದ್ದಿ,

ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಕ್ಕಳಿಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದಿದೆ.

Two children drown, Two children drown in Hosakote, Hosakote crime news, ಇಬ್ಬರು ಬಾಲಕಿಯರು ನೀರುಪಾಲು, ಹೊಸಕೋಟೆಯಲ್ಲಿ ಇಬ್ಬರು ಬಾಲಕಿಯರು ನೀರುಪಾಲು, ಹೊಸಕೋಟೆ ಸುದ್ದಿ, ಹೊಸಕೋಟೆ ಅಪರಾಧ ಸುದ್ದಿ,
ಪಾತ್ರೆ ತೊಳೆಯಲು ಹೋಗಿ ನೀರುಪಾಲಾದ ಇಬ್ಬರು ಮಕ್ಕಳು
author img

By

Published : Nov 5, 2021, 4:32 AM IST

ಹೊಸಕೋಟೆ: ಪಾತ್ರೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಟಿ.ಅಗ್ರಹಾರ ಗ್ರಾಮದಲ್ಲಿ ಘಟನೆ ನಡೆದಿದೆ.

ಮೃತ ಮಕ್ಕಳಾದ ಶ್ರಾವಣಿ (12) ಅರ್ಚನಾ (9) ಎಂದು ಗುರುತಿಸಲಾಗಿದೆ. ಇಬ್ಬರು ಹೆಣ್ಣು ಮಕ್ಕಳ ಪೋಷಕರು ಬಡ ಕುಟುಂಬದವರಾಗಿದ್ದು, ಗ್ರಾಮದ ಹೊರ ಭಾಗದಲ್ಲಿ ಮನೆ ಕಟ್ಟಿಕೊಂಡು ಕೃಷಿಯ ಜತೆಗೆ ಕೂಲಿ ಕೆಲಸ ಮಾಡುತ್ತಿದ್ದರು. ಮಕ್ಕಳನ್ನು ಬಿಟ್ಟು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದು, ಮಕ್ಕಳಿಬ್ಬರು ಮನೆಯಲ್ಲಿ ಇದ್ದರು ಎನ್ನಲಾಗಿದೆ.

ಮನೆಗೆ ಹೊಂದಿಕೊಂಡಿರುವ ಕೃಷಿ ಹೊಂಡದ ಬಳಿ ಪಾತ್ರೆಗಳನ್ನು ತೊಳೆಯಲೆಂದು ತಂದಿಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ತಂಗಿ ಅರ್ಚನಾ ಹೊಂಡದಲ್ಲಿ ಬಿದ್ದಿದ್ದಾಳೆ. ಈಕೆಯನ್ನು ರಕ್ಷಣೆ ಮಾಡಲು ಹೋಗಿ ಅಕ್ಕ ಶ್ರಾವಣಿ ಕೂಡ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಈ ಮಕ್ಕಳ ಚಿಕ್ಕಮ್ಮ ಹೊಲದಲ್ಲಿ ಮೇವಿಗಾಗಿ ಬಂದು ಮನೆಯಲ್ಲಿ ನೋಡಿದಾಗ ಮಕ್ಕಳು ಕಾಣದ ಬಗ್ಗೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ. ಕೂಲಿಗೆ ಹೋಗಿದ್ದ ತಾಯಿಗೆ ಕರೆ ಮಾಡಿ ಮಕ್ಕಳು ಮನೆಯಲ್ಲಿ ಕಾಣದ ಬಗ್ಗೆ ಹೇಳಿದ್ದಾಳೆ. ಶಾಲೆಗೆ ಹೋಗದೆ ಮನೆಯಲ್ಲಿದ್ದ ಮಕ್ಕಳನ್ನು ಎಲ್ಲಡೆ ಹುಡುಕಾಟ ನಡೆಸಿದ್ದಾರೆ. ಆದ್ರೂ ಪತ್ತೆಯಾಗದೆ ಹಿನ್ನೆಲೆ ಹೊಂಡದಲ್ಲಿ ಹುಡುಕಾಟ ನಡೆಸಿದ್ದು, ಮಕ್ಕಳಿಬ್ಬರು ಹೊಂಡದ ತಳ ಭಾಗದಲ್ಲಿ ಪತ್ತೆಯಾಗಿದ್ದಾರೆ. ನಂತರ ಮಕ್ಕಳಿಬ್ಬರನ್ನು ಹೊರ ತೆಗೆದಿದ್ದಾರೆ. ಈ ಘಟನೆ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೃಷಿ ಹೊಂಡಗಳನ್ನು ನಿರ್ಮಿಸುವಾಗ ಹೊಂಡದ ಸುತ್ತಲು ರಕ್ಷಣೆ ಬೇಲಿಯನ್ನು ನಿರ್ಮಿಸಬೇಕು ಎಂಬ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಅಮಾಯಕ ಮಕ್ಕಳಿಬ್ಬರು ಬಲಿಯಾಗಿರುವುದು ದುರಂತವೇ ಸರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.