ETV Bharat / state

ಮಹಿಳೆಯರಿಗೆ ಉಚಿತ ಸಾರಿಗೆ: ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ - ಈಟಿವಿ ಭಾರತ ಕನ್ನಡ

ಕಾಂಗ್ರೆಸ್​​ ನೀಡಿರುವ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಯೋಜನೆ ಜಾರಿಗೆ ತರುವ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸಲಿದ್ದಾರೆ.

ರಾಮಲಿಂಗ ರೆಡ್ಡಿ
ರಾಮಲಿಂಗ ರೆಡ್ಡಿ
author img

By

Published : May 30, 2023, 11:25 AM IST

ಬೆಂಗಳೂರು: ಚುನಾವಣೆಗೂ ಮುನ್ನ ನೀಡಿದ ಐದು ಗ್ಯಾರಂಟಿಗಳ ಜಾರಿಗೆ ಸಿದ್ಧತೆ ನಡೆಸಿರುವ ಸರ್ಕಾರ ಇಂದು ಸಾರಿಗೆ ಇಲಾಖೆ ಜೊತೆ ಮಹತ್ವದ ಸಭೆ ಹಮ್ಮಿಕೊಂಡಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ವಿಭಾಗಗಳ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವರು. ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಡಬ್ಲ್ಯೂಕೆಆರ್​ಟಿಸಿ, ಕೆಕೆಆರ್ಟಿಸಿ ವಿಭಾಗಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಚಿವರು ಚರ್ಚಿಸಲಿದ್ದು, ಈ ನಿಗಮಗಳಲ್ಲಿ ಒಟ್ಟು ಎಷ್ಟು ಬಸ್​ಗಳಿವೆ, ಅವುಗಳ ಸ್ಥಿತಿ ಹೇಗಿದೆ, ನಷ್ಟದಲ್ಲಿರುವ ಪ್ರಮಾಣ ಎಷ್ಟು ಹಾಗೂ ಈ ನಾಲ್ಕು ನಿಗಮಗಳ ಬಸ್ಸುಗಳಲ್ಲಿ ಸಂಚರಿಸುವ ಒಟ್ಟು ಮಹಿಳೆಯರ ಸಂಖ್ಯೆ ಎಷ್ಟು ಎಂಬ ಮಾಹಿತಿ ಪಡೆಯಲಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ವಿಭಾಗಗಳ ಒಟ್ಟು ಪರಿಸ್ಥಿತಿ ಅವಲೋಕಿಸಿ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿರುವ ರೆಡ್ಡಿ ಇದರ ಜೊತೆಗೆ ಉಚಿತ ಬಸ್ಸು ಪ್ರಯಾಣ ವ್ಯವಸ್ಥೆ ನೀಡುವುದರಿಂದ ಸಾರಿಗೆ ಸಂಸ್ಥೆಗೆ ಆಗುವ ಆರ್ಥಿಕ ಹೊರೆಯ ಮಾಹಿತಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಾಂತಿನಗರದ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿದೆ.

ಬಸ್​ನಲ್ಲಿ ಸಂಚರಿಸುವ ಒಟ್ಟು ಮಹಿಳೆಯರ ಸಂಖ್ಯೆ ಎಷ್ಟು? ಪುರುಷರ ಸಂಖ್ಯೆ ಎಷ್ಟು? ಉಚಿತ ಸಂಚಾರ ನೀಡುವ ಭರವಸೆಯನ್ನು ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದು ಇದರ ಜಾರಿಯಿಂದ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗೆ ಯಾವ ರೀತಿಯ ಹೊರೆ ಆಗಲಿದೆ. ಬಂಡವಾಳ ಕ್ರೋಢೀಕರಣಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು. ಈಗಾಗಲೇ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಅಲ್ಲೆಲ್ಲ ಈ ರೀತಿಯ ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಅಲ್ಲಿನ ಪರಿಸ್ಥಿತಿ ಹೇಗಿದೆ?. ಅಕ್ಕ ಪಕ್ಕದ ರಾಜ್ಯಗಳಲ್ಲಿ ಹಾಗೂ ದೇಶದ ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳ ಸ್ಥಿತಿಗತಿ ಹೇಗಿದೆ? ನಮ್ಮ ಪರಿಸ್ಥಿತಿ ಹೇಗಿದ್ದು ಈ ಉಚಿತ ಸಂಚಾರ ಮಹಿಳೆಯರಿಗೆ ಕಲ್ಪಿಸುವುದರಿಂದ ಯಾವ ಸ್ಥಿತಿಗೆ ತಲುಪುತ್ತೇವೆ.

ಆದಾಯವನ್ನು ಬೇರೆ ಯಾವ ಮೂಲಗಳಿಂದ ಸಂಗ್ರಹಿಸಲು ಸಾಧ್ಯ? ನಗರದ ವಿವಿಧೆಡೆ ನಿರ್ಮಾಣಗೊಂಡಿರುವ ಟಿಟಿಎಂಸಿಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬಹುದು. ಹೊಸದಾಗಿ ಬಸ್ ಕೊಂಡುಕೊಳ್ಳುವ ಅಗತ್ಯ ಎಷ್ಟಿದೆ?. ಇವು ಸೇರಿದಂತೆ ಹಲವು ವಿಚಾರಗಳ ಕುರಿತು ರಾಮಲಿಂಗ ರೆಡ್ಡಿ ಸಮಾಲೋಚಿಸಲಿದ್ದಾರೆ. ಸಭೆಯ ವಿಚಾರವಾಗಿ ಖಾಸಗಿ ಮಾಧ್ಯಮ ಒಂದಕ್ಕೆ ಮಾಹಿತಿ ನೀಡಿರುವ ರಾಮಲಿಂಗ ರೆಡ್ಡಿ, ಮಹಿಳೆಯರಿಗೆ ಉಚಿತ ಸಂಚಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.

ಅದನ್ನು ಯಾವ ರೀತಿ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಎಷ್ಟು ಮಂದಿ ಮಹಿಳೆಯರು ಬಸ್​ನಲ್ಲಿ ಓಡಾಡುತ್ತಾರೆ ಅವರಿಗೆ ಉಚಿತ ಸಂಚಾರದ ವ್ಯವಸ್ಥೆಯನ್ನು ಹೇಗೆ ವ್ಯವಸ್ಥಿತವಾಗಿ ಕಲ್ಪಿಸಲು ಸಾಧ್ಯ? ಎಲ್ಲಕ್ಕೂ ಒಂದು ಲೆಕ್ಕಾಚಾರ ಬೇಕಲ್ಲ ಅದರಿಂದಾಗಿ ನಾವು ಮಾಹಿತಿ ಕಲೆ ಹಾಕುತ್ತೇವೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಮಾದರಿಯಲ್ಲೇ ಮಹಿಳೆಯರಿಗೂ ಪಾಸ್ ವಿತರಿಸುವ ಚಿಂತನೆ ಇದೆ. ಉಚಿತ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಯಾವ್ಯಾವ ರೀತಿಯ ಕ್ರಮ ಬೇಕು ಅದನ್ನೆಲ್ಲ ಕೈಗೊಳ್ಳಲು ಮುಂದಾಗಿದ್ದೇವೆ ಎಂದಿದ್ದಾರೆ. ಇದರ ಜೊತೆ ಅನ್ಯ ರಾಜ್ಯಗಳ ಸಾರಿಗೆ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳನ್ನು ಸಹ ಅನುಸರಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಇದನ್ನೂ ಓದಿ: ದ್ವೇಷ ರಾಜಕಾರಣ, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.