ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ಸ್ಫೋಟಗೊಂಡಿದೆ. ಒಂದೇ ದಿನ 566ಕ್ಕೆ ಏರಿಕೆ ಆಗಿದೆ. ಇಂದು 1,08,726 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 566 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 30,05,798ಕ್ಕೆ ಏರಿಕೆ ಆಗಿದೆ. ಇನ್ನು 245 ಮಂದಿ ಗುಣಮುಖರಾಗಿದ್ದು, ಈತನಕ 29,59,674 ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಾವಿನ ಸಂಖ್ಯೆಯಲ್ಲೂ ಏರಿಕೆ ಆಗಿದ್ದು, ಇಂದು 6 ಸೋಂಕಿತರು ಮೃತರಾಗಿದ್ದಾರೆ. ಒಟ್ಟಾರೆ 38,324ಕ್ಕೆ ಸಾವಿನ ಸಂಖ್ಯೆ ಏರಿದೆ.
ಸದ್ಯ ಸಕ್ರಿಯ ಪ್ರಕರಣ 7,771ಕ್ಕೆ ಏರಿಕೆ ಕಂಡಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.52ರಷ್ಟಿದೆ. ಸಾವಿನ ಪ್ರಮಾಣ ಶೇ. 1.06ರಷ್ಟು ಇದೆ.
ರಾಜಧಾನಿಯಲ್ಲಿ 3ನೇ ಅಲೆ ಮುನ್ಸೂಚನೆ : ರಾಜಧಾನಿ ಬೆಂಗಳೂರಿನಲ್ಲಿಂದು ಕಳೆದೊಂದು ತಿಂಗಳಿನಿಂದ ಸೋಂಕಿತರ ಸಂಖ್ಯೆ 300ರೊಳಗೆ ಬರ್ತಿತ್ತು. ಆದರೆ, ಇಂದು ಒಂದೇ ದಿನ 400 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,62,397 ಕ್ಕೆ ಏರಿದೆ. 130 ಜನರು ಡಿಸ್ಚಾರ್ಜ್ ಆಗಿದ್ದು, 12,39,616 ಗುಣಮುಖರಾಗಿದ್ದಾರೆ. ನಾಲ್ವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,392ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣ 6,388 ರಷ್ಟಿವೆ.
ರೂಪಾಂತರಿ ಅಪ್ಡೇಟ್ಸ್:
- ಅಲ್ಪಾ- 155
- ಬೇಟಾ-08
- ಡೆಲ್ಟಾ- 2569
- ಡೆಲ್ಟಾ ಸಬ್ ಲೈನ್ ಏಜ್- 949
- ಕಪ್ಪಾ-160
- ಈಟಾ-01
- ಒಮಿಕ್ರಾನ್- 38