ಬೆಂಗಳೂರು: ನಗರದಲ್ಲಿ 40,200 ವಿದ್ಯಾರ್ಥಿಗಳು ಒಟ್ಟು 83 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ. ನಗರದ ಶೇಷಾದ್ರಿಪುರಂ ಕಾಂಪೋಸಿಟ್ ಪಿಯು ಕಾಲೇಜ್ಗೆ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷಾ ಕೊಠಡಿಗೆ ತೆರಳಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದರು. 12 ಮಂದಿ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ ಎರಡು ಪ್ರತ್ಯೇಕ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಹಾಗೂ ದೇಹದ ಉಷ್ಣತೆ ಪರೀಕ್ಷಿಸಿದ ಬಳಿಕವೇ ಪರೀಕ್ಷಾ ಕೊಠಡಿ ಒಳಗೆ ಹೋಗಲು ಅನುಮತಿ ನೀಡಲಾಯಿತು.
ಪೋಷಕರನ್ನು ಕೂಡ ಪರೀಕ್ಷಾ ಕೇಂದ್ರದ ಬಳಿ ನಿಂತುಕೊಳ್ಳಲು ಬಿಡದೆ ಕಳುಹಿಸಲಾಗುತ್ತಿತ್ತು. ಪರೀಕ್ಷಾ ಕೇಂದ್ರಗಳತ್ತ ಪೊಲೀಸ್ ಭದ್ರತೆ ನೀಡಲಾಗಿದೆ. ಇಂದು ಎರಡು ಪರೀಕ್ಷೆ ನಡೆಯಲಿವೆ.