ETV Bharat / state

ಕಲಬುರಗಿಯಲ್ಲಿ ಮೂವರು ನಕಲಿ ಸಿಬಿಐ ಅಧಿಕಾರಿಗಳ ಬಂಧನ

author img

By

Published : Jul 26, 2022, 8:56 PM IST

ವ್ಯಕ್ತಿಯೊಬ್ಬನನ್ನು ಕಾನೂನು ಬಾಹಿರ ದಂದೆ ಮಾಡುತ್ತಿದ್ದೀಯಾ ಎಂದು ಹೆದರಿಸಿದ ಖತರ್ನಾಕ್​ ನಕಲಿ ಸಿಬಿಐ ಅಧಿಕಾರಿಗಳು ತಮ್ಮೊಂದಿಗೆ ಜೀಪ್​ನಲ್ಲಿ ಕರೆದೊಯ್ದು ನಡುರಸ್ತೆಯಲ್ಲಿ ಡೀಲ್ ಕುದುರಿಸಲು ಪ್ರಯತ್ನಿಸಿ ಅಸಲಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ನಕಲಿ ಸಿಬಿಐಗಳ ಬಂಧನ
ನಕಲಿ ಸಿಬಿಐಗಳ ಬಂಧನ

ಕಲಬುರಗಿ: ಸಿಬಿಐ ಅಧಿಕಾರಿಗಳು ಅಂತ ಪಕ್ಕಾ‌ ಫಿಲ್ಮಿ ಸ್ಟೈಲಲ್ಲಿ ಎಂಟ್ರಿಕೊಟ್ಟು ವ್ಯಕ್ತಿಯೊಬ್ಬನನ್ನು ಕಾನೂನು ಬಾಹಿರ ದಂದೆ ಮಾಡುತ್ತಿದ್ದೀಯಾ ಎಂದು ಹೆದರಿಸಿ ತಮ್ಮೊಂದಿಗೆ ಜೀಪ್​ನಲ್ಲಿ ಕರೆದೊಯ್ದಿರುವ ಘಟನೆ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲದೇ, ನಡು ರಸ್ತೆಯಲ್ಲಿಯೇ ಡೀಲ್ ಕುದುರಿಸಲು ಪ್ರಯತ್ನಿಸಿ ಖತರ್ನಾಕ್​ ನಕಲಿ ಸಿಬಿಐ ಅಧಿಕಾರಿಗಳು ಅಸಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಇದೇ ತಿಂಗಳು 21 ರಂದು ರಾತ್ರಿ 10.30 ರ ಸುಮಾರಿಗೆ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮಕ್ಕೆ ಸಿಬಿಐ ಪೊಲೀಸರು ಎಂದು ಹೇಳಿಕೊಂಡು ಬಂದಿದ್ದ ನಾಲ್ವರು, ಚೌಡಾಪೂರದ ಹಣಮಂತ ದೇವಕರ್ ಎಂಬುವರ ಬಳಿ ತೆರಳಿ ನೀನು ಮಟಕಾ ಬರೆದುಕೊಳ್ಳುವ ದಂದೆ ಮಾಡುತ್ತಿದ್ದೀಯಾ ಎಂದು ಬೆದರಿಸಿ ತಮ್ಮ ವಾಹನದಲ್ಲಿಯೇ ಆತನನ್ನು ಕರೆದೊಯ್ದಿದ್ದರು. ಬಳಿಕ ಒಂದಿಷ್ಟು ದೂರದಲ್ಲಿರುವ ಮದರಾ (ಬಿ) ಕ್ರಾಸ್ ಹತ್ತಿರ ವಾಹನ‌ ನಿಲ್ಲಿಸಿ ಡೀಲ್ ಕುದುರಿಸಲು ಮುಂದಾಗಿದ್ದಾರೆ‌.

ನೀನು ಮಟ್ಕಾ ದಂದೆ ಮಾಡುತ್ತಿದ್ದೀಯ. ಒಂದು ಲಕ್ಷ ಹಣ ಕೊಡು. ನಿನ್ನನ್ನು ಇಲ್ಲೇ ಬಿಡ್ತೇವೆ. ಇಲ್ಲದಿದ್ದರೆ ಜೈಲಿಗೆ ಕರೆದೊಯ್ಯಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಆದರೆ, ಇವರ ದುರದೃಷ್ಟಕ್ಕೆ ಅಲ್ಲಿ ಜನ ಸೇರಿದ್ದಾರೆ.‌ ಇದರಿಂದಾಗಿ ಗಾಬರಿಗೊಂಡ ನಕಲಿ‌ ಅಧಿಕಾರಿಗಳು ವಾಹನ ಸಮೇತ ಪರಾರಿಯಾಗಿದ್ದರು. ಸುದ್ದಿ ತಿಳಿದು ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಕೃಷ್ಣ ಪವಾರ್, ಜ್ಞಾನೇಶ್ ಚೌಹಾನ್, ಬಸವರಾಜ್ ದಿಲಂಗೆ, ನಕಲಿ ಅಧಿಕಾರಿಗಳು ಎಂಬ ಆರೋಪದ ಮೇಲೆ ಬಂಧಿತರಾದವರು. ಇನ್ನೋರ್ವ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ. ಬಂಧಿತ ಆರೋಪಿಗಳು ಚೌಡಾಪುರ ಸುತ್ತಮುತ್ತಲಿನವರೇ ಆಗಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ವಾಹನ ಜಪ್ತಿಪಡಿಸಿಕೊಂಡ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಓದಿ: ಸಂಬಳ ಕೊಡಲು ಲಂಚ: ಎಸಿಬಿ ಬಲೆಗೆ ಬಿದ್ದ ಆರೋಗ್ಯ ಇಲಾಖೆ ನೌಕರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.