ಬೆಂಗಳೂರು : ಇವರು ಒಂದು ರೀತಿ ಕಳ್ಳತನವನ್ನೇ ಸರ್ಕಾರಿ ಕೆಲಸದ ರೀತಿ ಮಾಡಿಕೊಂಡು ಬಂದಿದ್ದಾರೆ. ಕಳೆದ 30 ವರ್ಷದಿಂದ ಕಳ್ಳತನವನ್ನೇ ಫುಲ್ ಟೈಮ್ ಜಾಬ್ ಮಾಡಿಕೊಂಡಿದ್ದ ಕಳ್ಳರಿಬ್ಬರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇರ್ಫಾನ್ ಶರೀಫ್ ಮತ್ತು ಬಿಲಾಲ್ ಖಾನ್ ಬಂಧಿತ ಆರೋಪಿಗಳು.
ಕಳೆದ 30 ವರ್ಷಗಳಿಂದ ಇರ್ಫಾನ್ ಶರೀಫ್ ಮತ್ತು ಬಿಲಾಲ್ ಖಾನ್ ಕಳ್ಳತನವನ್ನೇ ಕುಲ ಕಸುಬು ಮಾಡಿಕೊಂಡಿದ್ದ. ಈ ಹಿಂದೆ ರಾಜ್ಯಾದ್ಯಂತ 33 ಬಾರಿ ಪೊಲೀಸರು ಇವರನ್ನ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದರು.
ಇದರಲ್ಲಿ ಮುಖ್ಯ ಕಳ್ಳನಾಗಿರುವ ಇರ್ಫಾನ್ ಜೈಲಿನಲ್ಲಿ ಸಿಗುವ ಹೊಸ ಕಳ್ಳರನ್ನು ಪರಿಚಯ ಮಾಡಿಕೊಂಡು ಟ್ರೈನ್ ಮಾಡುತ್ತಿದ್ದನಂತೆ. ಬೀಗ ಹಾಕಿದ್ದ ಮನೆಗಳನ್ನ ಗುರುತಿಸಿ ಕಳ್ಳತನ ಮಾಡುತ್ತಿದ್ದ ಈ ಖತರ್ನಾಕ್ ಕಳ್ಳರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಇರ್ಫಾನ್ ಮೇಲೆ ಬೆಂಗಳೂರಲ್ಲೇ ಹದಿನೈದು ಕೇಸ್ ಇವೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರು ಇರ್ಫಾನ್ ಮತ್ತು ಬಿಲಾಲ್‌ನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ. ಈ ಗ್ಯಾಂಗ್ ಹಿಂದೆ ಬಿದ್ದಿದ್ದ ಪುಟ್ಟೇನಹಳ್ಳಿ ಪಿಎಸ್ಐ ಪ್ರಸನ್ನ ಮತ್ತು ತಂಡ ಈ ಕಳ್ಳರನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ