ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಉಳ್ಳವರ ಮನೆಗೆ ಕನ್ನ ಹಾಕಿ ಆಸೆ ತೀರಿದ ಬಳಿಕ ಉಳಿದ ಹಣವನ್ನ ಧಾರ್ಮಿಕ ಕೇಂದ್ರಗಳಿಗೆ, ನಿರ್ಗತಿಕರಿಗೆ ದಾನ ಮಾಡುತ್ತಿದ್ದ ವಿಚಿತ್ರ ಕಳ್ಳನನ್ನು ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜಾನ್ ಮೆಲ್ವಿನ್ ಬಂಧಿತ ಆರೋಪಿ. ನಗರದ ಅತಿ ಹಳೆಯ ಮನೆಗಳ್ಳರಲ್ಲಿ ಒಬ್ಬನಾದ ಮೆಲ್ವಿನ್ ಪ್ರತಿ ಬಾರಿ ಬಂಧನವಾಗಲೂ 10-15 ದಿನಗಳಲ್ಲೇ ಜಾಮೀನು ಪಡೆಯುತ್ತಿದ್ದ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳಿವೆ. ವಿಚಿತ್ರ ಎಂದರೆ ಕದ್ದ ಹಣದಲ್ಲಿ ತನ್ನ ಆಸೆ ತೀರಿದ ಬಳಿಕ ಉಳಿದ ಹಣವನ್ನ ಚರ್ಚ್, ದೇವಾಲಯಗಳ ಹುಂಡಿಗೆ ಹಾಕುವುದು ಹಾಗೂ ದಾನ ಮಾಡುವ ಕೆಲಸ ಮಾಡುತ್ತಿದ್ದನಂತೆ.
ಬರೋಬ್ಬರಿ 50ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರುವ ಮೆಲ್ವಿನ್ ವಿರುದ್ಧ ಪೀಣ್ಯಾ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ವಿವಿಧೆಡೆ ಪ್ರಕರಣಗಳಿದ್ದವು. ಸದ್ಯ ಮಡಿವಾಳ ಠಾಣಾ ಪೊಲೀಸರು ಆರೋಪಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆಭರಣ ವ್ಯಾಪಾರಿಗಳ ನಿವಾಸದ ಮೇಲೆ ಇಡಿ ದಾಳಿ: 150 ಕೋಟಿ ಮೌಲ್ಯದ ಆಸ್ತಿ,ವಜ್ರಾಭರಣ, ನಗದು ವಶಕ್ಕೆ