ಬೆಂಗಳೂರು: ರಾಜ್ಯದ ಆಂತರಿಕಾ ಭದ್ರತಾ ಇಲಾಖೆ (ಐಎಸ್ಡಿ)ಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಗರುಡ ಕಮಾಂಡೋ ಪಡೆ ಕಾರ್ಯನಿರ್ವಹಿಸಲು ಸಿದ್ಧತೆ ನಡೆಸಿದೆ.
ಈಗಾಗಲೇ ಇರುವ ಪುರುಷರ ಗರುಡ ಪಡೆಗೆ ಸರಿಸಾಟಿಯಾಗಿ ಮಹಿಳಾ ಗರುಡ ಪಡೆ ತಯಾರಿ ನಡೆಸಿದ್ದು, ಹದಿನಾರು ಮಂದಿ ಬಾಲಕಿಯರ ಮಹಿಳಾ ಗರುಡ ಕಮಾಂಡೋ ತಮ್ಮ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ. ವಿಶೇಷವಾಗಿ ಮಹಿಳಾ ಗರುಡ ಪಡೆ ಜೊತೆ ಭಯೋತ್ಪಾದನಾ ಕೇಂದ್ರದ ಎಸ್ಪಿ ಎಂ.ಎಸ್. ಮಧುಕರ್ ವೀಣಾ ಹದಿನಾರು ಬಾಲಕಿಯರಿಗೆ ತರಬೇತಿ ನೀಡಿದ್ದಾರೆ. ಅದ್ಭುತ ಪರಿಣತಿ ಹೊಂದಿರುವ ಬಾಲಕಿಯರ ಗರುಡ ಕಮಾಂಡೋ ಪಡೆ ಈಗಾಗಲೇ ಸಜ್ಜಾಗಿದೆ.
ಓದಿ: ವಿಧಾನ ಪರಿಷತ್ ಸಭಾಪತಿ ಚುನಾವಣೆ ದಿನಾಂಕ ಪ್ರಕಟಿಸಿದ ರಾಜ್ಯಪಾಲರು
ಮಹಿಳಾ ಗರುಡ ಪಡೆಯು ಭಯೋತ್ಪಾದಕರು ಹಾಗೂ ಉಗ್ರರನ್ನ ಮಟ್ಟ ಹಾಕಲು ಇದ್ದು, ನಗರದ ಅಹಿತಕರ ಘಟನೆ ಮೇಲೆ ಕಣ್ಗಾವಲು ಇಡಲಿದೆ ಐಎಸ್ಡಿ ಎಡಿಜಿಪಿ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.