ಬೆಂಗಳೂರು: ಲಾಕಕ್ಡೌನ್ನಿಂದಾಗಿ ಪ್ರತಿನಿತ್ಯದ ದುಡಿಮೆ ಮೇಲೆ ಅವಲಂಬಿತರಾಗಿದ್ದ ಆಟೋ-ಟ್ಯಾಕ್ಸಿ ಚಾಲಕರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಐದು ಸಾವಿರ ಧನಸಹಾಯ ನೀಡುವಂತೆ ಬಿಬಿಎಂಪಿ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜೀದ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
![ಆಟೋ-ಟ್ಯಾಕ್ಸಿ ಚಾಲಕರಿಗೆ ಸಹಾಯಧನ ನೀಡಲು ಮನವಿ](https://etvbharatimages.akamaized.net/etvbharat/prod-images/kn-bng-03-letter-bbmp-7202707_17042020185005_1704f_1587129605_400.jpg)
ನಗರದಲ್ಲಿ ಅಂದಾಜು 2,50,000 ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿದ್ದಾರೆ. ದೆಹಲಿ ಸರ್ಕಾರ ಇವರ ಕಷ್ಟಕ್ಕೆ ಸ್ಪಂದಿಸಿ ಲಾಕ್ಡೌನ್ ಮುಗಿಯುವವರೆಗೆ ಐದು ಸಾವಿರ ಕೊಡಲು ಮುಂದಾಗಿದೆ. ಅದೇ ರೀತಿ ಕರ್ನಾಟಕ ಸರ್ಕಾರವೂ ನೆರವಾಗುವಂತೆ ಮನವಿ ಮಾಡಿದ್ದಾರೆ.