ಬೆಂಗಳೂರು: ಸರ್ಜನ್ಗಳು ಅಳತೆ ಮೀರಿದ ಸೇವೆ ಸಲ್ಲಿಸುತ್ತಿದ್ದು, ಆಧುನಿಕ ಬದುಕಿನ ಜೀವ ರಕ್ಷಕರಾಗಿದ್ದಾರೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ದಿನೇಶ್ ಕುಮಾರ್ ಹೇಳಿದರು.
ಶಸ್ತ್ರಚಿಕಿತ್ಸಕರ ದಿನದ ಅಂಗವಾಗಿ ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಹಾಗೂ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸರ್ಜನ್ಗಳಾದ ಪ್ರೊ. ಪಿ.ಎಸ್. ಪಾರ್ಥಿಬನ್, ಪ್ರೊ ಎನ್ ನರಸಿಂಹನ್ ರನ್ನು ಗೌರವಿಸಿ ಮಾತನಾಡಿದ ಅವರು, ಸರ್ಜನ್ಗಳು ಶಸ್ತ್ರಚಿಕಿತ್ಸೆ ನಡೆಸುವಾಗ ಜೀವನದಲ್ಲಿ ಒಮ್ಮೆ ಮಾತ್ರ ನೋವು ನೀಡುತ್ತಾರೆ. ಆದರೆ ಜೀವನ ಪರ್ಯಂತ ನಗು ನಗುತಾ ಬದುಕು ಸಾಗಿಸುವಂತೆ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಶಸ್ತ್ರಚಿಕಿತ್ಸಕರು ಮಾನವ ರೂಪದ ದೇವರು ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಕೆ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಸಣ್ಣ ಸಣ್ಣ ವಿಚಾರಗಳು ಸಹ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್ ಆಗುತ್ತಿವೆ. ವೈದ್ಯಕೀಯ ಕಾನೂನು ರೂಪಿಸುವ ಮುನ್ನ ವೈದ್ಯಕೀಯ ಸಮೂಹದ ಅಭಿಪ್ರಾಯ ಪಡೆಯಬೇಕು. ಇಲ್ಲವಾದಲ್ಲಿ ಕಾನೂನು ನಿರುಪಯುಕ್ತವಾಗಿದೆ ಎಂದರು.
ಶಸ್ತ್ರಚಿಕಿತ್ಸಾ ತಜ್ಞರು ಮತ್ತೊಬ್ಬರ ಜೀವ ರಕ್ಷಣೆಗಾಗಿ ಸದಾ ಶ್ರಮಿಸುತ್ತಿದ್ದಾರೆ: ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಅಧ್ಯಕ್ಷ ಡಾ ಹೆಚ್ ವಿ ಶಿವರಾಮ್ ಮಾತನಾಡಿ, ಶಸ್ತ್ರಚಿಕಿತ್ಸಾ ತಜ್ಞರುಗಳು ಮತ್ತೊಬ್ಬರ ಜೀವ ರಕ್ಷಣೆಗಾಗಿ ಸದಾ ಶ್ರಮಿಸುತ್ತಿದ್ದಾರೆ. ಸರ್ಕಾರಿ, ಸಣ್ಣ ಸಣ್ಣ ಆಸ್ಪತ್ರೆಗಳಲ್ಲೂ ಜೀವ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾರೆ. ನಗರ, ಅರೆ ನಗರ ಪ್ರದೇಶಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮತ್ತಿತರ ಆರೋಗ್ಯ ಸೇವಾ ಚಟುವಟಿಕೆಗಳಲ್ಲೂ ತೊಡಗಿದ್ದಾರೆ. ನಮ್ಮ ಸರ್ಜಿಕಲ್ ಸೊಸೈಟಿ ಸಂಸ್ಥೆಯಲ್ಲಿ 1500ಕ್ಕೂ ಹೆಚ್ಚು ಖ್ಯಾತ ಸರ್ಜಿಕಲ್ ಡಾಕ್ಟರ್ಗಳು ಇದ್ದಾರೆ ಎಂದು ಹೇಳಿದರು.
ಟೂರಿಸಂನಲ್ಲಿ ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಹೆಸರು ಪಡೆದಿದೆ: ಬೆಂಗಳೂರು ಸರ್ಜಿಕಲ್ ಸೊಸೈಟಿ ಅಧ್ಯಕ್ಷ ಡಾ ವೆಂಕಟೇಶ್ ಮಾತನಾಡಿ, ಶುಶ್ರತರವರು ವಿಶ್ವದ ಮೊದಲ ಆಪರೇಷನ್ ಮಾಡಿದ ಸರ್ಜಿಕಲ್ ವೈದ್ಯ. ಅದರಿಂದ ಅಂತಾರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನವನ್ನು ಅಚರಿಸಲಾಗುತ್ತಿದೆ. ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಮತ್ತು ಹಲವಾರು ರೋಗಗಳ ನಿವಾರಣೆಗಾಗಿ ಶಸ್ತ್ರಚಿಕಿತ್ಯೆ ಮುಖ್ಯ. ಇಂದು ಮೆಡಿಕಲ್ ಟೂರಿಸಂನಲ್ಲಿ ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಹೆಸರು ಪಡೆದಿದೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯ ಭವಿಷ್ಯ, ಆಧುನಿಕ ತಂತ್ರಜ್ಞಾನ ಕುರಿತು ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ. ಎಂ. ವಿಜಯ ಕುಮಾರ್ ಉಪನ್ಯಾಸ ನೀಡಿದರು. ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಅಧ್ಯಕ್ಷ ಡಾ. ಹೆಚ್. ವಿ ಶಿವರಾಮ್, ಖಜಾಂಚಿ ಡಾ. ರಾಜಶೇಖರ್ ಸಿ ಜಕ್ಕಾ, ಡಾ. ಕೆ. ಎಲ್. ವೆಂಕಟೇಶ್, ಡಾ. ಮನೀಶ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ಪ್ರಮಾಣಪತ್ರ ಪಡೆಯಬೇಕಾಗಿಲ್ಲ : ಹೈಕೋರ್ಟ್