ಬೆಂಗಳೂರು: ದೇಶದಲ್ಲಿರುವ ಬ್ರಿಟನ್ನ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಮಸಾಲೆ ದೋಸೆ ಸವಿದು ಖುಷಿಪಟ್ಟಿದ್ದಾರೆ. ಜೊತೆಗೆ ಹೊಸ ಅನುಭವವನ್ನು ಅವರು ಪಡೆದಿದ್ದಾರೆ. ಅದೇನಂದ್ರೆ ಬರೀಗೈಯಲ್ಲಿ ತಿಂದರೆ ಹೆಚ್ವು ಸ್ವಾದಿಷ್ಟವಾಗಿರುತ್ತದೆ ಎಂದಿದ್ದಾರೆ.
ಅಲೆಕ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ನಿನ್ನೆ ಮಸಾಲೆ ದೋಸೆಯನ್ನು ಕೈಯಲ್ಲಿ ತಿನ್ನಬೇಕೇ ಅಥವಾ ಫೋರ್ಕ್-ಚಾಕು ಉಪಯೋಗಿಸಬೇಕಾ? ಎಂದು ಪ್ರಶ್ನೆ ಮಾಡಿ ಪೋಲ್ ಮಾಡಿದ್ದರು. ಇದರ ಪ್ರಕಾರ, ಶೇ 92 ರಷ್ಟು ಜನ ಕೈಯಲ್ಲಿ ತಿನ್ನಬೇಕು ಎಂದು ಮತ ಹಾಕಿದ್ದರು. ಉಳಿದ ಶೇ 8ರಷ್ಟು ಜನ ಫೋರ್ಕ್-ಚಾಕು ಎಂದಿದ್ದರು.
ಆದರೆ, ವಿಡಿಯೋ ಸಹಿತ ಅಲೆಕ್ಸ್ ಎಲ್ಲಿಸ್ ಶೇ92ರಷ್ಟು ಜನರ ಅಭಿಪ್ರಾಯ ಸರಿ ಇದೆ. ದೋಸೆ ಕೈಯಲ್ಲಿ ತಿಂದರೆ ರುಚಿಯಾಗಿರುತ್ತೆ ಎಂದು ಟ್ವೀಟ್ ಜೊತೆ ಬೊಂಬಾಟ್ ಗುರು ಎಂದಿದ್ದಾರೆ.
-
92% of Twitter is correct! It tastes better with the hand. ✋
— Alex Ellis (@AlexWEllis) August 5, 2021 " class="align-text-top noRightClick twitterSection" data="
ಮಸಾಲೆ ದೋಸೆ | ಬೊಂಬಾಟ್ ಗುರು👌 | एकदम मस्त 🙌 https://t.co/fQJZ3bKfgW pic.twitter.com/xoBM2VEqxD
">92% of Twitter is correct! It tastes better with the hand. ✋
— Alex Ellis (@AlexWEllis) August 5, 2021
ಮಸಾಲೆ ದೋಸೆ | ಬೊಂಬಾಟ್ ಗುರು👌 | एकदम मस्त 🙌 https://t.co/fQJZ3bKfgW pic.twitter.com/xoBM2VEqxD92% of Twitter is correct! It tastes better with the hand. ✋
— Alex Ellis (@AlexWEllis) August 5, 2021
ಮಸಾಲೆ ದೋಸೆ | ಬೊಂಬಾಟ್ ಗುರು👌 | एकदम मस्त 🙌 https://t.co/fQJZ3bKfgW pic.twitter.com/xoBM2VEqxD
ಕನ್ನಡದಲ್ಲಿ ಟ್ವಿಟ್ ಮಾಡಿದ ಅಲೆಕ್ಸ್ ಎಲ್ಲಿಸ್:
ಬ್ರಿಟನ್ನ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಕನ್ನಡದಲ್ಲಿ ಟ್ವಿಟ್ ಮಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. 'ಮಸಾಲೆ ದೋಸೆ, ಬೊಂಬಾಟ್ ಗುರು' ಎಂದು ಕನ್ನಡದಲ್ಲೇ ಟ್ವಿಟ್ ಮಾಡಿ ಗಮನ ಸೆಳೆದಿದ್ದಾರೆ.
ಓದಿ: ದೇಶ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮನ.. ಯೋಧನಿಗೆ ಬಾಡ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ