ETV Bharat / state

ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ - ವಿಧಾನಸೌಧ

''ಮಕ್ಕಳ ಒಳಿತಿಗೆ ಸರಿಯಾಗಿ ಕ್ರಮ ತೆಗೆದುಕೊಳ್ತೇವೆ. ತುಂಬಾ ಸೂಕ್ಷ್ಮ ವಿಚಾರಗಳಿವು. ಹಾಗಾಗಿ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಬೇಕಿದೆ. ದೊಡ್ಡ ಮಟ್ಟದ ಚರ್ಚೆಗಳ ಅವಶ್ಯಕತೆಯಿದೆ. ಹಾಗಾಗಿ ಮಕ್ಕಳ ಒಳಿತನ್ನು ನೋಡಿಯೇ ಮಾಡಬೇಕು'' ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Etv Bharat
Etv Bharat
author img

By

Published : Jun 8, 2023, 3:57 PM IST

ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸರಳವಾಗಿ ಪೂಜೆ ನೆರವೇರಿಸಿ, ಪ್ರವೇಶ ಮಾಡಿದರು.

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸರಳವಾಗಿ ಪೂಜೆ ನೆರವೇರಿಸಿ, ಪ್ರವೇಶ ಮಾಡಿದರು. ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಕಚೇರಿ ಪೂಜೆ ಮಾಡಿ ಕಾರ್ಯಾರಂಭ ಮಾಡಿದ ಶಿಕ್ಷಣ ಸಚಿವ‌ರು, ತಂದೆ ಮಾಜಿ ಸಿಎಂ ಬಂಗಾರಪ್ಪ ಹಾಗೂ ತಾಯಿ ಶಕುಂತಲಾ ಅವರ ಫೋಟೋಗೆ ಪೂಜೆ ಸಲ್ಲಿಸಿದರು.

ಇದಾದ ಬಳಿಕ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿ, ಸಮವಸ್ತ್ರ, ಪಠ್ಯ ಪುಸ್ತಕದ ಬಗ್ಗೆ ಪ್ರಸ್ತಾವನೆ ಬಂದಿಲ್ಲ. ಮಕ್ಕಳ ಭವಿಷ್ಯಕ್ಕೆ ಏನಾದರೂ ತೊಂದರೆಯಿದ್ದರೆ ಆಗ ಮಾತ್ರ ನಾವು ಮುಂದುವರಿಯಬಹುದು. ಅದನ್ನ ಬಿಟ್ಟು ಬೇರೆ ಯಾವುದೇ ತೀರ್ಮಾನವಿಲ್ಲ ಎಂದರು.

ಈಗಾಗಲೇ ಶಾಲೆಗಳಿಗೆ ಪುಸ್ತಕಗಳು ಹೋಗಿವೆ: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬಂದಿದ್ದರು. ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷನಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸಲು ನನಗೂ ಸ್ವಲ್ಪ ತೊಂದರೆಯಿದೆ. ಸಿಎಂ ಇದರಲ್ಲಿ ವಿಶೇಷ ಆಸಕ್ತಿ ತೋರಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡ್ತೇವೆಂದು ಹೇಳಿದ್ದೆವು. ಪ್ರಣಾಳಿಕೆಯಲ್ಲಿ ನಾವು ಹೇಳಿದ್ದೆವು. ಈಗಾಗಲೇ ಶಾಲೆಗಳಿಗೆ ಪುಸ್ತಕಗಳು ತಲುಪಿವೆ. ಸಪ್ಲಿಮೆಂಟರಿ ಮಾಡುವ ಅವಕಾಶವಿದೆ. ಮಕ್ಕಳ ಹಿತದೃಷ್ಟಿಯಿಂದ ಮಾಡಬಹುದು. ತಜ್ಞರು, ಹಿರಿಯರ ಸಲಹೆ ಮೇಲೆ ಮಾಡಬಹುದು. ಕ್ಯಾಬಿನೆಟ್​ನಲ್ಲಿ ಇಟ್ಟು ಪಾಸ್ ಮಾಡಬಹುದು ಎಂದು ತಿಳಿಸಿದರು.

ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಕೇಸರೀಕರಣಕ್ಕೆ ಬ್ರೇಕ್ ಹಾಕುವ ವಿಚಾರಕ್ಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳ ಒಳಿತಿಗೆ ಸರಿಯಾಗಿ ಕ್ರಮ ತೆಗೆದುಕೊಳ್ತೇವೆ. ತುಂಬಾ ಸೂಕ್ಷ್ಮ ವಿಚಾರಗಳಿವು. ಹಾಗಾಗಿ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಬೇಕಿದೆ. ದೊಡ್ಡ ಮಟ್ಟದ ಚರ್ಚೆಗಳ ಅವಶ್ಯಕತೆಯಿದೆ. ಹಾಗಾಗಿ ಮಕ್ಕಳ ಒಳಿತನ್ನ ನೋಡಿಯೇ ಮಾಡಬೇಕು. ಮಕ್ಕಳಿಗೆ ಒಳಿತಾಗುವಂತೆ ನಾವು ಮಾಡ್ತೇವೆ ಎಂಬ ವಿವರ ನೀಡಿದರು. ಶಾಲಾ ಪಠ್ಯ ಪರಿಷ್ಕರಣೆ ವಿಚಾರ ಮಾಧ್ಯಮಗಳಲ್ಲಿ ಬೇರೆ ಚರ್ಚೆಗಳಾಗ್ತಿವೆ. ಈ ವರ್ಷದಲ್ಲೇ ನಾವು ಮಾಡಬಹುದು. ಸಪ್ಲಿಮೆಂಟರಿಯಲ್ಲಿ ಬದಲಾವಣೆಗೆ ಅವಕಾಶವಿದೆ. ಈ ವರ್ಷವೇ ನಾವು ಪರಿಷ್ಕರಣೆ ಮಾಡಬಹುದು. ಮಕ್ಕಳ ಒಳಿತು ನೋಡಿ ಮಾಡ್ತೇವೆ. ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡ್ತೇವೆ. ಈ ವರ್ಷ ಮಾಡಲ್ಲ ಮುಂದಿನ ವರ್ಷ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರ್ತಾ ಇದೆ. ಮಕ್ಕಳು ತಪ್ಪನ್ನು ಓದಬಾರದು. ತಪ್ಪು ಪಠ್ಯಗಳನ್ನು ಮುಂದಿನ ವರ್ಷದ ತನಕ ಕಾಯಬೇಕಿಲ್ಲ. ಹೀಗಾಗಿ ತಜ್ಞರೂ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವತಃ ಸಿಎಂ ಅವರೇ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಸಭೆ ನಡೆಯುತ್ತಿದೆ. ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೇವೆ. ಯಾವ ಪಾಠ ಮಾಡಬೇಕು, ಯಾವುದು ಮಾಡಬಾರದು ಎಂಬುದನ್ನೂ ತಿಳಿಸುತ್ತೇವೆ ಎಂಬ ಸಚಿವರು ಮಾಹಿತಿ ನೀಡಿದರು.

ಶಿಕ್ಷಕರ ನೇಮಕದಲ್ಲಿ ಎರಡು ಸಮಸ್ಯೆ ಇದೆ. ಕಾನೂನಿನ ತೊಡಕಿದೆ, ಅದರ ಬಗ್ಗೆ ಎಜಿ ಅವರ ಚರ್ಚೆ ಮಾತನಾಡಲಾಗುತ್ತದೆ‌. ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರೇ ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ಆದಷ್ಟು ಶೀಘ್ರವಾಗಿ ಪರಿಹರಿಸಲಾಗುತ್ತದೆ‌ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ಸೇರಿ ವಿಪಕ್ಷ ನಾಯಕನ ಸ್ಥಾನ ಕಳೆದುಕೊಂಡರಾ ಲಕ್ಷ್ಮಣ ಸವದಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.