ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ಸಾಲಮನ್ನಾ ಯೋಜನೆ ಬಗ್ಗೆ ಪ್ರಸ್ತಾಪವಾಗುತ್ತಲೇ ಇರುತ್ತದೆ. ಹಿಂದಿನ ಬಿಜೆಪಿ ಸರ್ಕಾರ, ಸಿದ್ದರಾಮಯ್ಯ ಸರ್ಕಾರ, ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಯೋಜನೆ ಜಾರಿಗೆ ತಂದಿದ್ದು, ರೈತರ ಆರ್ಥಿಕ ಸಂಕಷ್ಟ ಕಡಿಮೆ ಮಾಡುವ ಪ್ರಯತ್ನ ನಡೆಸಿವೆ. ಕಳೆದ ಮೂರು ವರ್ಷದ ಸಾಲಮನ್ನಾ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ರೈತರ ಸಾಲಮನ್ನಾ ಯೋಜನೆಯನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿವೆ. ಪ್ರಣಾಳಿಕೆಗಳಲ್ಲೇ ಇದರ ಬಗ್ಗೆ ಪ್ರಸ್ತಾಪ ಮಾಡಿ ರೈತರ ಓಲೈಕೆಗೆ ಯತ್ನಿಸುತ್ತಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಘೋಷಣೆ ಮಾಡಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ನಂತರ ಪೇಚಿಗೆ ಸಿಲುಕಬೇಕಾಯಿತು. ನಂತರ ಸಾಕಷ್ಟು ಪ್ರಾಯಾಸಪಟ್ಟು ಸಾಲಮನ್ನಾ ಯೋಜನೆಯನ್ನು ಜಾರಿಗೆ ತರಬೇಕಾಯಿತು. ನಂತರ ಕುಮಾರಸ್ವಾಮಿ ಸರ್ಕಾರ ಪತನಗೊಂಡು ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಾಲಮನ್ನಾ ಯೋಜನೆಯಡಿ ರೈತರ ಸಾಲಮನ್ನಾ ಮಾಡುವುದಕ್ಕೆ ಕೊಕ್ಕೆ ಹಾಕದೆ ಘೋಷಿತ ಕಾಲಮಿತಿಯೊಳಗಿನ ಸಾಲಮನ್ನಾ ಮಾಡುತ್ತಿದೆ.
ಸಾಲಮನ್ನಾ ಅಂಕಿ-ಅಂಶ:
ಸಹಕಾರಿ ಸಂಸ್ಥೆಗಳಲ್ಲಿನ ಕುಟುಂಬಕ್ಕೆ ಒಂದು ಲಕ್ಷ ರೂ.ವರೆಗಿನ ಸಾಲಮನ್ನಾ ಯೋಜನೆಯಲ್ಲಿ ಕಳೆದ ಮೂರು ವರ್ಷದಲ್ಲಿ 16.41 ಲಕ್ಷ ರೈತರು ಸಾಲ ಮನ್ನಾ ಅನುಕೂಲ ಪಡೆದಿದ್ದಾರೆ. ಕಳೆದ ಒಂದು ವರ್ಷದಲ್ಲಿ 10.82 ಲಕ್ಷ ರೈತರಿಗೆ 5586.59 ಕೋಟಿ ಸಾಲ ಮನ್ನಾ ಮಾಡಲಾಗಿದೆ.
ಬಾಕಿ ಉಳಿದಿರುವ ರೈತರ ಸಂಖ್ಯೆ:
ಸಮರ್ಪಕವಾಗಿ ದಾಖಲಾತಿ ನೀಡಿದ ಎಲ್ಲಾ ರೈತರಿಗೂ ಸಾಲ ಮನ್ನಾ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹೊಸದಾಗಿ ರೇಷನ್ ಕಾರ್ಡ್ ಪಡೆದ, ಎರಡು ಸಹಕಾರ ಸಂಘಗಳಲ್ಲಿ ಸಾಲ ಪಡೆದ, ಸಮರ್ಪಕ ದಾಖಲಾತಿಯನ್ನು ನೀಡದೇ ಇರುವ 1,70,489 ರೈತರ ಸಾಲ ಮನ್ನಾ ಪರಿಶೀಲಿಸಲು ಬಾಕಿ ಉಳಿದಿದೆ. ಸಾಲಮನ್ನಾ ಮೊತ್ತ ದಾಖಲೆಗಳನ್ನು ಪರಿಶೀಲಿಸಿದ ನಂತರ ಸಾಲಮನ್ನಾ ಯೋಜನೆಯಡಿ ಇನ್ನು ಎಷ್ಟು ಹಣ ಮನ್ನಾ ಮಾಡುವುದು ಬಾಕಿ ಉಳಿದಿದೆ ಎನ್ನುವುದು ತಿಳಿಯಲಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ.
ಜಿಲ್ಲಾವಾರು ಸಾಲಮನ್ನಾ ವಿವರ:
ಬಾಗಲಕೋಟೆ - 120085 ರೈತರ 63.37 ಕೋಟಿ
ಬೆಂಗಳೂರು ಗ್ರಾಮಾಂತರ - 16311 ರೈತರ 76.38 ಕೋಟಿ
ಬೆಂಗಳೂರು ನಗರ - 7238 ರೈತರ 36.78 ಕೋಟಿ
ಬೆಳಗಾವಿ - 260252 ರೈತರ 102 ಕೋಟಿ
ಬಳ್ಳಾರಿ - 60290 ರೈತರ 34.74 ಕೋಟಿ
ಬೀದರ್ - 97659 ರೈತರ 40.10 ಕೋಟಿ
ವಿಜಯಪುರ - 138512 ರೈತರ 56.49 ಕೋಟಿ
ಚಾಮರಾಜನಗರ - 15971 ರೈತರ 97.38 ಕೋಟಿ
ಚಿಕ್ಕಬಳ್ಳಾಪುರ - 25482 ರೈತರ 16.29 ಕೋಟಿ
ಚಿತ್ರದುರ್ಗ - 33648 ರೈತರ 15.17 ಕೋಟಿ
ದಕ್ಷಿಣ ಕನ್ನಡ - 57945 ರೈತರ 42.92 ಕೋಟಿ
ದಾವಣಗೆರೆ - 57038 ರೈತರ 19.12 ಕೋಟಿ
ಧಾರವಾಡ - 13053 ರೈತರ 53.43 ಕೋಟಿ
ಗದಗ - 15610 ರೈತರ 60.24 ಕೋಟಿ
ಕಲಬುರಗಿ - 38553 ರೈತರ 10.42 ಕೋಟಿ
ಹಾಸನ - 111310 ರೈತರ 45.55 ಕೋಟಿ
ಹಾವೇರಿ - 20485 ರೈತರ 65.90 ಕೋಟಿ
ಕೊಡಗು - 26342 ರೈತರ 20.42 ಕೋಟಿ
ಕೋಲಾರ - 9636 ರೈತರ 86.11 ಕೋಟಿ
ಕೊಪ್ಪಳ - 21791 ರೈತರ 90.22 ಕೋಟಿ
ಮಂಡ್ಯ - 102820 ರೈತರ 47.62 ಕೋಟಿ
ರಾಯಚೂರು - 45333 ರೈತರ 20.93 ಕೋಟಿ
ರಾಮನಗರ - 35266 ರೈತರ 16.16 ಕೋಟಿ
ಶಿವಮೊಗ್ಗ - 30634 ರೈತರ 12.33 ಕೋಟಿ
ತುಮಕೂರು - 110491 ರೈತರ 38.72 ಕೋಟಿ
ಉಡುಪಿ - 20998 ರೈತರ 14.42 ಕೋಟಿ
ಉತ್ತರ ಕನ್ನಡ - 78053 ರೈತರ 47 ಕೋಟಿ
ಯಾದಗಿರಿ - 10858 ರೈತರ 24.10 ಕೋಟಿ