ಬೆಂಗಳೂರು: ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯ ಸರ್ಕಾರ ಕೋಟಿ ಕಂಠ ಗಾಯನ ಎಂಬ ವಿನೂತನ ಅಭಿಯಾನ ಆರಂಭಿಸಿದ್ದು, ಈ ಕೋಟಿ ಕಂಠ ಗಾಯನ ಆಕಾಶದಲ್ಲೂ ಗಮನ ಸೆಳೆಯಿತು. ಇಂದು ಬೆಳಂಬೆಳಗ್ಗೆಯೇ ಸ್ಪೈಸ್ ಜೆಟ್ನಲ್ಲಿ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದರು.
ಹೌದು, ಆಗಸದಲ್ಲಿ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕನ್ನಡಾಭಿಮಾನವನ್ನು ಮೆರೆದಿದ್ದಾರೆ. ವರನಟ ಡಾ. ರಾಜ್ ಕುಮಾರ್ ಹಾಡಿರುವ ಡಾ. ಹಂಸಲೇಖ ರಚಿಸಿರುವ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು' ಎಂಬ ಗೀತೆ ಹಾಡುವ ಮೂಲಕ ಕನ್ನಡ ಭಾಷೆಗೆ ನಮನ ಸಲ್ಲಿಸಿದರು.
ಇನ್ನು ಈ ವಿಡಿಯೋವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
-
ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು. @flyspicejet #ಕೋಟಿ_ಕಂಠ_ಗಾಯನ#ನನ್ನ_ನಾಡು_ನನ್ನ_ಹಾಡು pic.twitter.com/iaV7DTPVi8
— Sunil Kumar Karkala (@karkalasunil) October 28, 2022 " class="align-text-top noRightClick twitterSection" data="
">ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು. @flyspicejet #ಕೋಟಿ_ಕಂಠ_ಗಾಯನ#ನನ್ನ_ನಾಡು_ನನ್ನ_ಹಾಡು pic.twitter.com/iaV7DTPVi8
— Sunil Kumar Karkala (@karkalasunil) October 28, 2022ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು. @flyspicejet #ಕೋಟಿ_ಕಂಠ_ಗಾಯನ#ನನ್ನ_ನಾಡು_ನನ್ನ_ಹಾಡು pic.twitter.com/iaV7DTPVi8
— Sunil Kumar Karkala (@karkalasunil) October 28, 2022
ಓದಿ: ವಿಶ್ವ ದಾಖಲೆ ನಿರ್ಮಿಸಿದ ಕೋಟಿ ಕಂಠ ಗಾಯನ: ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ದನಿಯಾದ ಸಿಎಂ