ಬೆಂಗಳೂರು : ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉದಯ್ ಶೆಟ್ಟಿ, ನಟರಾಜ್, ಸುರೇಶ್ ರಾಮಕೃಷ್ಣ, ಕೃಷ್ಣಗೌಡ ಹಾಗೂ ಶಂಕರ್ ಎಂಬುವರನ್ನು ಬಂಧಿಸಿ ₹20 ಲಕ್ಷ ಮೌಲ್ಯದ ನಗದು, ಒಂದು ವೇಯಿಂಗ್ ಮಿಷಿನ್ ಹಾಗೂ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ಹಲವು ತಿಂಗಳಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಫೈವ್ಸ್ಟಾರ್ ಹೋಟೆಲ್ನಲ್ಲಿ ಐಷರಾಮಿ ರೂಂ ಬುಕ್ ಮಾಡಿಕೊಂಡು ಇಸ್ಟೀಟ್ ಆಡುತ್ತಿದ್ದರು. ಇದರಲ್ಲಿ ಭಾಗಿಯಾದ ಹಲವರು ನಿವೃತ್ತ ಸರ್ಕಾರಿ ಅಧಿಕಾರಿಗಳೂ ಸೇರಿ ವಿವಿಧ ಕ್ಷೇತ್ರಗಳಲ್ಲಿರುವವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ PSI ಖಡಕ್ ವಾರ್ನಿಂಗ್
ಜೂಜಾಟ ಆಡುತ್ತಿರುವ ಬಗ್ಗೆ ಹೋಟೆಲ್‌ನವರಿಗೆ ಮಾಹಿತಿ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಸಿಸಿಬಿ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.