ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು.
ಮಾರ್ಚ್ 15ರಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಮೊದಲ ಲಸಿಕೆ ಪಡೆದಿದ್ದ ಅವರು ಇಂದು ಎರಡನೇ ಡೋಸ್ ಪಡೆದುಕೊಂಡರು. ಅಂದು ಲಸಿಕೆ ಪಡೆದ ಸಂದರ್ಭ ಸೂಜಿ ಚುಚ್ಚುವುದೇ ಗೊತ್ತಾಗಲಿಲ್ಲ ಎಂದು ಹೇಳಿ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಹಿಂದಿರುಗಿದ್ದರು. ಇಂದು ತಮ್ಮ ಆಪ್ತರೊಂದಿಗೆ ತೆರಳಿ ಕೋವಿಡ್ ಎರಡನೇ ಲಸಿಕೆ ಪಡೆದು ವಾಪಸಾಗಿದ್ದಾರೆ.
ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಸಿದ್ದರಾಮಯ್ಯ
ಇತ್ತೀಚೆಗಷ್ಟೇ ಕೋವಿಡ್ ಪಾಸಿಟಿವ್ ಬಂದು ಗುಣಮುಖರಾಗಿರುವ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸಿದ್ದರಾಮಯ್ಯ ಜತೆ ಇದ್ದರು.