ಬೆಂಗಳೂರು: ಉಡುಪಿಯ ಕುಂದಾಪುರದ ಕೋಟತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ, ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು ಸಿಎಂ ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
-
ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು
— Siddaramaiah (@siddaramaiah) December 31, 2021 " class="align-text-top noRightClick twitterSection" data="
ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ
ಅತ್ಯಂತ ನಾಚಿಕೆಗೇಡಿನ ಸಂಗತಿ.
ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು @CMofKarnataka ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು.
2/6#ದಲಿತವಿರೋಧಿ_ಬಿಜೆಪಿ
">ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು
— Siddaramaiah (@siddaramaiah) December 31, 2021
ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ
ಅತ್ಯಂತ ನಾಚಿಕೆಗೇಡಿನ ಸಂಗತಿ.
ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು @CMofKarnataka ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು.
2/6#ದಲಿತವಿರೋಧಿ_ಬಿಜೆಪಿಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು
— Siddaramaiah (@siddaramaiah) December 31, 2021
ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ
ಅತ್ಯಂತ ನಾಚಿಕೆಗೇಡಿನ ಸಂಗತಿ.
ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು @CMofKarnataka ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು.
2/6#ದಲಿತವಿರೋಧಿ_ಬಿಜೆಪಿ
ಹಿಂದೂಗಳೆಲ್ಲ ಒಂದು ಎಂದು ಉದ್ಘೋಷಿಸುತ್ತಿರುವ ಬಿಜೆಪಿ ಬ್ರಾಂಡಿನ ಹಿಂದೂ ಧರ್ಮದಲ್ಲಿ ಕೊರಗ ಸಮುದಾಯ ಸೇರಿಲ್ಲವೇ?. ದಲಿತರನ್ನು ಅಸ್ಪೃಶ್ಯರನ್ನಾಗಿಯೇ ಉಳಿಸುವುದು ಇವರ ಗುಪ್ತ ಅಜೆಂಡಾವೇ?. ದೌರ್ಜನ್ಯಕ್ಕೀಡಾದ ಕೊರಗರ ಪರ ಕಂಬನಿ ಮಿಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ಬಾರದೆ ಪೊಲೀಸರು ಕೊರಗ ಬಂಧುಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆಯೇ?. ಹಾಗೆ ನಡೆದಿದ್ದರೆ ಅವರೊಬ್ಬ ಅಸಮರ್ಥ ಸಚಿವ, ಗಮನಕ್ಕೆ ಬಂದು ನಡೆದಿದ್ದರೆ ಅದು ಆತ್ಮವಂಚಕ ನಡವಳಿಕೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೋಟದಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ: ಎಎಸ್ಐ ಸಸ್ಬೆಂಡ್, ಐವರು ಪೊಲೀಸರ ಎತ್ತಂಗಡಿ
ಹಿಂದೂಗಳ ರಕ್ಷಣೆಗಾಗಿಯೇ ಅವತಾರವೆತ್ತಿ ಬಂದವರಂತೆ ಬೊಬ್ಬಿಡುತ್ತಿರುವ, ಸ್ಥಳೀಯ ಲೋಕಸಭಾ ಸದಸ್ಯರೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೌನವನ್ನು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಮೌನಸಮ್ಮತಿ ಎಂದು ಅರ್ಥೈಸೋಣವೇ?. ಎಸ್ಸಿಪಿ/ಟಿಎಸ್ಪಿ ಕಾಯ್ದೆ ಸೇರಿದಂತೆ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳಿಗೆ ಹಣ ಮಂಜೂರು ಮಾಡದೆ ಆರ್ಥಿಕವಾಗಿ ದಲಿತರನ್ನು ಸಾಯಿಸುತ್ತಿರುವ ಬಿಜೆಪಿ ಸರ್ಕಾರ, ಈಗ ಪೊಲೀಸರಿಂದಲೂ ದೌರ್ಜನ್ಯ ನಡೆಸಲು ಹೊರಟಂತಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪಿಎಸ್ಐ ಸಂತೋಷ್ ಬಿ.ಪಿ ಅವರನ್ನು ಅಮಾನತು ಮಾಡಲಾಗಿದ್ದು, ಉಳಿದ ಐವರು ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ.
ಇದನ್ನೂ ಓದಿ: ಡಿಕೆಶಿಗೆ ಬೆಕ್ಕಿನ ಕನಸಲ್ಲಿ ಇಲಿ ಎಂಬಂತಾಗಿದೆ: ಸಿಎಂ ತಿರುಗೇಟು