ಬೆಳಗಾವಿ: ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜಸ್ತಂಭ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಬೂದಿ ಮುಚ್ಚಿದ ಕೆಂಡವಾಗಿ ಮಾರ್ಪಾಡಾಗಿದೆ. ಮಹಾನಗರ ಪಾಲಿಕೆ ಮುಂದಿನ ಕನ್ನಡ ಧ್ವಜ ತೆರವುಗೊಳಿಸಬೇಕೆಂದು ಅಥವಾ ಭಗವಾ ಸ್ಥಾಪಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ, ಶಿವಸೇನಾ ಪುಂಡರು ಪುಂಡಾಟ ನಡೆಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಆಗಮಿಸಿರುವ ಶಿವಸೇನಾ ಕಾರ್ಯಕರ್ತರು ಹೈಡ್ರಾಮಾ ನಡೆಸುತ್ತಿದ್ದು, ಕರ್ನಾಟಕದ ಗಡಿಯೊಳಗೆ ನುಸುಳಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ: ಅಬಕಾರಿ ಖಾತೆಯಲ್ಲಿ ನಾನು ಮಾಡುವುದು ಏನೂ ಇಲ್ಲ, ಬೇರೆ ಖಾತೆ ನೀಡುವಂತೆ ತಿಳಿಸಿದ್ದೇನೆ: ಎಂಟಿಬಿ
ಬೆಳಗಾವಿ ಶಿನ್ನೋಳ್ಳಿ ಚೆಕ್ ಪೋಸ್ಟ್, ಕೊಗನೊಳ್ಳಿ ಚೆಕ್ ಪೋಸ್ಟ್ನಲ್ಲಿ ಹೈ ಅಲರ್ಟ್ ಆಗಿರುವ ಪೊಲೀಸರು ಈ ಎರಡೂ ಚೆಕ್ ಪೋಸ್ಟ್ನಲ್ಲಿ ಇನ್ನೂರಕ್ಕೂ ಹೆಚ್ಚು ಬಂದೋಬಸ್ತ್ ಕೈಗೊಂಡಿದ್ದು, ಪೊಲೀಸರನ್ನು ತಳ್ಳಿ ಗಡಿಯೊಳಗೆ ಬರಲು ಯತ್ನಿಸಿದ್ದಾರೆ.
ಈಗ ಸದ್ಯಕ್ಕೆ ಬೆಳಗಾವಿ ಗಡಿ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಶಿವಸೇನಾ ಪುಂಡರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.