ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಸಂಬಂಧಿಸಿ ಕಡಬದಲ್ಲಿ ವಿಹೆಚ್ಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಕೋಮು ವಿಷಬೀಜ ಬಿತ್ತಿ ಗಲಭೆಗೆ ಪ್ರಚೋದನೆ ಮತ್ತು ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆಂದು ಆರೋಪಿಸಿ ಕಡಬ ಎಸ್ಡಿಪಿಐ ಕಾರ್ಯಕರ್ತರು ವಿಎಚ್ಪಿ ವಿರುದ್ಧ ದೂರು ನೀಡಿದ್ದಾರೆ.
ಶಾಂತಿಪ್ರಿಯ ಕಡಬದಲ್ಲಿ ಕೋಮು ಪ್ರಚೋದನೆ ಮಾಡಿ ಸಾರ್ವಜನಿಕರಲ್ಲಿ ಭಯ, ಆತಂಕ ಹುಟ್ಟುಹಾಕಿರುವುದಲ್ಲದೆ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಿರುವ ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸುವಂತೆ ಕಡಬ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
![SDPI complaining against to VHP in Kadaba police station](https://etvbharatimages.akamaized.net/etvbharat/prod-images/kn-dk-01-complaint-av-pho-kac10008_15082020102752_1508f_1597467472_40.jpg)
ಪ್ರತಿಭಟನೆಯ ಮೂಲಕ ವಿಧ್ವಂಸಕ ಕೃತ್ಯ ನಡೆಸುವುದಾಗಿ ಬಹಿರಂಗವಾಗಿ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗೆ ಸವಾಲು ಎಸೆದಿರುವುದು ಕಡಬದ ಸ್ವಾಸ್ಥ್ಯ ಕೆಡಿಸುವ ಹುನ್ನಾರವಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಪ್ರಮುಖರನ್ನು ವಿಚಾರಿಸಿ ಮುಂದೆ ಸುಳ್ಳು ಆರೋಪಗಳನ್ನು ಮಾಡದಂತೆ ಎಚ್ಚರಿಕೆಯನ್ನೂ ನೀಡಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.