ETV Bharat / state

'ಹೈಬ್ರಿಡ್ ಕೌಶಲ’ದ ಬೇಡಿಕೆ ಈಡೇರಿಸಲು ಉನ್ನತ ಶಿಕ್ಷಣದಲ್ಲಿ ಬಹುಶಿಸ್ತೀಯತೆ ಅನಿವಾರ್ಯ:ಕೆ.ಕಸ್ತೂರಿರಂಗನ್

“ಬೆಂಗಳೂರು ತಂತ್ರಜ್ಞಾನ ಮೇಳ-2020”ದಲ್ಲಿ ಭಾಗವಹಿಸಿದ್ದ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್, ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾನವೀಯ ವಿಷಯಗಳನ್ನೂ ಸರಿಸಮನಾಗಿ ಓದಬೇಕು; ಅದೇ ರೀತಿ ಸಾಹಿತ್ಯ ಮತ್ತು ಮಾನವೀಯ ವಿಷಯಗಳನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನವನ್ನು ಸರಿಸಮನಾಗಿ ಅರಿಯಬೇಕಾಗುತ್ತದೆ ಎಂದಿದ್ದಾರೆ.

scientist k.kasturi rangan speech in bengaluru tech summit-2020
ಕೆ.ಕಸ್ತೂರಿರಂಗನ್ ಹೇಳಿಕೆ
author img

By

Published : Nov 22, 2020, 11:22 AM IST

ಬೆಂಗಳೂರು: ಮುಂಬರುವ ದಿನಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳು “ಹೈಬ್ರಿಡ್ ಕೌಶಲ”ಗಳನ್ನು ಬೇಡುತ್ತವೆ. ಇದಕ್ಕೆ ಅನುಗುಣವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಶಿಸ್ತೀಯವಾಗಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷರಾಗಿರುವ ‘ಇನ್ಸಾ’ ಯೋಜನಾ ಆಯೋಗ ಸದಸ್ಯ ಕಸ್ತೂರಿರಂಗನ್ ಸಲಹೆ ನೀಡಿದರು.

ಕೆ.ಕಸ್ತೂರಿರಂಗನ್ ಹೇಳಿಕೆ
“ಬೆಂಗಳೂರು ತಂತ್ರಜ್ಞಾನ ಮೇಳ-2020”ದಲ್ಲಿ ಶನಿವಾರ “ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿ” ಕುರಿತು ಮಾತನಾಡಿದ ಅವರು, ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾನವೀಯ ವಿಷಯಗಳನ್ನೂ ಸರಿಸಮನಾಗಿ ಓದಬೇಕು; ಅದೇ ರೀತಿ ಸಾಹಿತ್ಯ ಮತ್ತು ಮಾನವೀಯ ವಿಷಯಗಳನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನವನ್ನು ಸರಿಸಮನಾಗಿ ಅರಿಯಬೇಕಾಗುತ್ತದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಅವರು ಆ್ಯಪಲ್ ಕಂಪನಿಯ ಯಶಸ್ಸಿಗೆ ಕಾರಣ ಏನೆಂಬುದರ ಬಗ್ಗೆ ದಿವಂಗತ ಸ್ಟೀವ್ ಜಾಬ್ಸ್ ಉಲ್ಲೇಖವೊಂದನ್ನು ನೆನಪಿಸಿ. “ಸೌಂದರ್ಯ ಪರಿಕಲ್ಪನೆಯನ್ನು ಮೇಳೈಸದಿದ್ದರೆ ನಮ್ಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇಷ್ಟು ವಿಸ್ತಾರವಾಗಿ ಬೆಳೆಯುತ್ತಿರಲಿಲ್ಲ” ಎಂದು ಅವರು ಹೇಳಿದ್ದರು. ಇಂದು ಯಾವುದೇ ಕ್ಷೇತ್ರದಲ್ಲಿ ಬಹುಶಿಸ್ತೀಯ (ಮಲ್ಟಿಡಿಸಿಪ್ಲಿನರಿ) ಅಗತ್ಯಗಳು ಎಷ್ಟಿವೆ ಎಂಬುದಕ್ಕೆ ಈ ಮಾತು ಕನ್ನಡಿಯಾಗಿದೆ ಎಂದರು.
21ನೇ ಶತಮಾನದ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೋರ್ಸ್​​ಗಳ ಆಯ್ಕೆ, ವಿಷಯಗಳ ಆಯ್ಕೆ ಇತ್ಯಾದಿಗಳಲ್ಲಿ ಆಯ್ಕೆಯ ಅವಕಾಶ ಹೆಚ್ಚಿಸಲಾಗಿದೆ. ಔದ್ಯೋಗಿಕ ಶಿಕ್ಷಣವನ್ನು ಕೂಡ ಅಳವಡಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಹೆಚ್ಚಿಸುವ ಉದ್ದೇಶ ಇದೆ. ಇದಕ್ಕಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಲಾಗುತ್ತದೆ ಎಂದು ಅವರು ಹೇಳಿದರು. ಹಾಗೆಯೇ ಸಂಶೋಧನೆಗಳಿಂದ ದೃಢಪಟ್ಟ ಅಂಶಗಳನ್ನು ಆಧರಿಸಿ ಮಕ್ಕಳಿಗೆ 3ನೇ ವಯಸ್ಸಿನಿಂದಲೇ ಬುನಾದಿ ಶಿಕ್ಷಣಕ್ಕೆ (ಫೌಂಡೇಷನಲ್ ಎಜುಕೇಷನ್) ಒತ್ತು ಕೊಡಲಾಗಿದೆ. ಆ ಹಂತದಲ್ಲೇ ಮಕ್ಕಳಿಗೆ ಅಕ್ಷರ ಪರಿಚಯ ಹಾಗೂ ಸಂಖ್ಯಾ ಪರಿಚಯ ಆಗಬೇಕು ಎಂಬುದಕ್ಕೆ ಆದ್ಯತೆ ಕೊಡಲಾಗಿದೆ. ಶಿಕ್ಷಣವನ್ನು ವಿದ್ಯಾರ್ಥಿ ಕೇಂದ್ರಿತವಾಗಿಸುವುದರ ಜೊತೆಗೆ ಬೋಧಕ ಕೇಂದ್ರೀತವಾಗಿಸುವುದಕ್ಕೂ ಗಮನ ನೀಡಲಾಗಿದೆ ಎಂದರು.ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯ ಕೊಡಲಾಗಿದೆ. ಶಿಕ್ಷಣವನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಭಾಷೆಯಲ್ಲೇ ಕಲ್ಪಿಸಬೇಕೆಂಬ ಆಶಯ ಈ ನೀತಿಯಲ್ಲಿ ಅಡಕವಾಗಿದೆ. ವಿದ್ಯಾರ್ಥಿಗಳು ಗಳಿಸುವ ಜ್ಞಾನವು ಭಾರತದ ಪರಂಪರೆ ಹಾಗೂ ಮೌಲ್ಯಗಳೊಂದಿಗೆ ಬೆಸೆದುಕೊಂಡಿರಬೇಕು ಎಂಬ ಧ್ಯೇಯವನ್ನೂ ಹೊಂದಿದೆ ಎಂದು ಅವರು ಹೇಳಿದರು. ಭಾರತೀಯ ಪರಂಪರೆಯು ಸಾವಿರಾರು ವರ್ಷಗಳ ಹಿಂದೆಯೇ 64 ವಿದ್ಯೆಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿದೆ. ಇದು ಬಹುಶಿಸ್ತೀಯತೆ ಅಲ್ಲದೆ ಬೇರೇನೂ ಅಲ್ಲ. ಅದನ್ನು ನಾವು ಈಗ ಪುನರ್ ಸ್ಥಾಪಿಸುವ ಅಗತ್ಯವಿದೆ. ಹೊಸ ಶಿಕ್ಷಣ ನೀತಿಯು “ಸಮತೆಯಿಂದ ಕೂಡಿದ ಸಮಾಜ” ನಿರ್ಮಿಸಲು ಪೂರಕವಾಗಲಿದೆ. ವಿವಿಧ ಜ್ಞಾನಶಾಖೆಗಳ ನಡುವೆ ಅಂತರ ಸಂಪರ್ಕ ಹಾಗೂ ಸಮಷ್ಟಿ ಅಭಿವೃದ್ಧಿ ಬಗ್ಗೆ ಗಮನ ಕೇಂದ್ರೀಕರಿಸಿದೆ ಎಂದು ಕಸ್ತೂರಿ ರಂಗನ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.