ETV Bharat / state

ಶ್ರೀಸತ್ಯ ಗಣಪತಿ ದೇವಸ್ಥಾನದಲ್ಲಿ 10 ಸಾವಿರ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿ ವಿತರಣೆ - Etv Bharat Kannada

ಜೆಪಿ ನಗರದ ಶ್ರೀಸತ್ಯ ಗಣಪತಿ ದೇವಸ್ಥಾನದ ವತಿಯಿಂದ ಹಬ್ಬದ ಪ್ರಯುಕ್ತ 10 ಸಾವಿರ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳ ನೀಡಲಾಗುತ್ತಿದೆ.

KN_BNG_07_SRI_SATYA_SAI_TEMPLE_10THOUSAND_IDOLS_7210969
ಪರಿಸರ ಸ್ನೇಹಿ ಗಣೇಶ ಮೂರ್ತಿಗಳು
author img

By

Published : Aug 27, 2022, 9:52 PM IST

Updated : Aug 28, 2022, 9:22 AM IST

ಬೆಂಗಳೂರು: ಗಣೇಶ ಚತುರ್ಥಿಯ ಪ್ರಯುಕ್ತ ಜೆಪಿ ನಗರದ ಶ್ರೀಸತ್ಯ ಗಣಪತಿ ದೇವಸ್ಥಾನದಲ್ಲಿ 10 ಸಾವಿರ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳ ವಿತರಣೆಯನ್ನು ಆಯೋಜಿಸಲಾಗಿದೆ. ಅಲ್ಲದೇ ಮೂರು ಬಗೆಯ ಹಣ್ಣುಗಳಿಂದ ದೇವಸ್ಥಾನದಲ್ಲಿ ವಿಶೇಷ ಆಲಂಕಾರವನ್ನು ಮಾಡಲಾಗುವುದು ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ಟ್ರಸ್ಟಿಗಳಾದ ರಾಮ್‌ ಮೋಹನ ರಾಜ್‌ ತಿಳಿಸಿದ್ದಾರೆ.

ಪ್ರತಿವರ್ಷ ಹೊಸದೊಂದು ಥೀಮ್​ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಹಾಗೂ ವಿಶೇಷ ಆಲಂಕಾರವನ್ನು ಮಾಡುವ ಮೂಲಕ ದೇಶದ ಗಮನವನ್ನು ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 10 ಸಾವಿರ ಪರಿಸರ ಸ್ನೇಹೀ ಗೌರಿ ಗಣೇಶ ಮೂರ್ತಿಗಳನ್ನು ವಿತರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿ ವಿತರಣೆ

ಜನರಿಗೆ ಪರಿಸರ ಸ್ನೇಹೀ ಗಣೇಶ ಹಾಗೂ ಗೌರಿಯ ಮೂರ್ತಿಯನ್ನು ಪ್ರಸಾದದ ರೂಪದಲ್ಲಿ ನೀಡುವ ಮೂಲಕ ಅವರ ಮನೆ ಹಾಗೂ ಮನಗಳಲ್ಲಿ ಪರಿಸರ ಸ್ನೇಹೀ ಹಬ್ಬದ ವಾತಾವರಣ ತುಂಬುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಸೋಮವಾರ 29ರಂದು ಬೆಳಗ್ಗೆ 10 ಗಂಟೆಗೆ ಪರಿಸರಸ್ನೇಹಿ ಗೌರಿ-ಗಣೇಶನ ವಿಗ್ರಹವನ್ನು ವಿತರಣೆ ಮಾಡಲಾಗುವುದು.

ಶಾಸಕ ಸತೀಶ್ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ ಅವರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಗೌರಿ-ಗಣೇಶನ ಮೂರ್ತಿಯನ್ನು ಉಚಿತವಾಗಿ ವಿತರಣೆ ಮಾಡಲಿದ್ದಾರೆ. ವಿತರಣೆಯ ಜೊತೆಯಲ್ಲಿಯೇ, ಗರ್ಭಗುಡಿಯ ಒಳಗೆ ಮೂರು ಬಗೆಯ ಹಣ್ಣುಗಳಿಂದ ದೇವರನ್ನು ಅಲಂಕಾರ ಮಾಡಲಿದ್ದು, ಭಕ್ತರು ಇದನ್ನು ಕಣ್ತುಂಬಿಕೊಳ್ಳಬಹುದು ಎಂದಿದ್ದಾರೆ.

ಇದನ್ನೂ ಓದಿ:ಅದ್ದೂರಿ ಗೌರಿ ಗಣೇಶನ ಹಬ್ಬಕ್ಕೆ ಬೆಂಗಳೂರು ಸಜ್ಜು: ಮಾರುಕಟ್ಟೆಗಳಲ್ಲಿ ಕಳೆಗಟ್ಟಿದ ವ್ಯಾಪಾರ

Last Updated : Aug 28, 2022, 9:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.