ETV Bharat / state

ಸಂಜನಾ ಆಪ್ತ ಫಾಸಿಲ್​​ಗಾಗಿ ತೀವ್ರ ಹುಡುಕಾಟ: ಸಿಸಿಬಿ ವಿಚಾರಣೆಗೆ ಹಾಜರಾದ ಕುಟುಂಬಸ್ಥರು

author img

By

Published : Sep 9, 2020, 4:11 PM IST

ಸಿಸಿಬಿ ಕಚೇರಿಗೆ ಶೇಖ್ ಫಾಸಿಲ್ ಕುಟುಂಬಸ್ಥರು ಫಾಸಿಲ್ ಪರ ವಕೀಲ ಕುಮಾರ್ ಗೌಡ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಶ್ರೀಲಂಕಾದ ಕೊಲೊಂಬೊದಲ್ಲಿರುವ ಕೆಸಿನೊಗೆ ಏಜೆಂಟ್ ಎಂಬ ಆರೋಪ ಈತನ ಮೇಲಿದೆ. ಇದೀಗ ಕುಟುಂಬಸ್ಥರ ವಿಚಾರಣೆ ಆರಂಭಗೊಂಡಿದೆ.

Sanjana family arrives to ccb office for attend inquiry
ಸಂಜನಾ ಆಪ್ತನಿಗಾಗಿ ಸಿಸಿಬಿ ತೀವ್ರ ಹುಡುಕಾಟ: ಸಿಸಿಬಿ ವಿಚಾರಣೆಗೆ ಹಾಜರಾದ ಕುಟುಂಬಸ್ಥರು

ಬೆಂಗಳೂರು: ಸಂಜನಾ ಗಲ್ರಾನಿ ಆಪ್ತ ಶೇಕ್ ಫಾಸಿಲ್ ಮನೆ ಮೇಲೆ ಸಿಸಿಬಿ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದರು. ಆದರೆ ಆ ವೇಳೆ ವಿಜಯನಗರದ ನಿವಾಸದಲ್ಲಿ ಫಾಸಿಲ್​ ಇರಲಿಲ್ಲ. ಹಾಗಾಗಿ ಆತನ ಪತ್ನಿ ಹಾಗೂ ಸಹೋದರನನ್ನು ವಿಚಾರಣೆ ನಡೆಸಿ ಇ‌ಂದು‌ ಸಿಸಿಬಿ ಕಚೇರಿಗೆ ಬರುವಂತೆ ಕುಟುಂಬಸ್ಥರಿಗೆ ಅಧಿಕಾರಿಗಳು ಸೂಚಿಸಿದ್ದರು.

ಸಿಸಿಬಿ ವಿಚಾರಣೆಗೆ ಹಾಜರಾದ ಕುಟುಂಬಸ್ಥರು

ಹೀಗಾಗಿ ಸಿಸಿಬಿ ಕಚೇರಿಗೆ ಶೇಖ್ ಫಾಸಿಲ್ ಕುಟುಂಬಸ್ಥರು ಫಾಸಿಲ್ ಪರ ವಕೀಲ ಕುಮಾರ್ ಗೌಡ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಸ್ಯಾಂಡಲ್​​​ವುಡ್ ಡ್ರಗ್ ಪ್ರಕರಣದಲ್ಲಿ ಫಾಸಿಲ್ ಹೆಸರೂ ಕೇಳಿಬಂದಿತ್ತು. ಶ್ರೀಲಂಕಾದ ಕೊಲೊಂಬೊದಲ್ಲಿರುವ ಕೆಸಿನೊಗೆ ಏಜೆಂಟ್ ಎಂಬ ಆರೋಪ ಈತನ ಮೇಲಿದೆ. ಹಾಗೆ ‌ಬಂಧಿತ ನಟಿ ಸಂಜನಾರೊಂದಿಗೆ ಲಿಂಕ್ ಇದ್ದು, ಈತ ಮಾಜಿ ಸಚಿವರ ಆಪ್ತನೂ ಆಗಿದ್ದಾನೆ.

shek fasil
ಸಂಜನಾ ಗಲ್ರಾನಿ ಆಪ್ತ ಶೇಕ್ ಫಾಸಿಲ್

ಡ್ರಗ್ ಪ್ರಕರಣದಲ್ಲಿ ಹೆಸರು ಕೇಳಿ ಬರ್ತಿದ್ದಂತೆ ಫಾಸಿಲ್ ತಲೆಮರೆಸಿಕೊಂಡಿದ್ದು, ನಿನ್ನೆ ಆತನ ಸಹೋದರನನ್ನು ಕಚೇರಿಗೆ ಕರೆಸಿ ವಿಚಾರಣೆ ಮಾಡಿದ್ದ ಸಿಸಿಬಿ ತಂಡ, ತದ ನಂತರ ಮನೆ ಮೇಲೆ ದಾಳಿ ‌ಮಾಡಿ ಕುಟುಂಬಸ್ಥರಿಗೆ ಫಾಸಿಲ್ ಕುರಿತು ಮಾಹಿತಿ ನೀಡುವಂತೆ ಕೇಳಿದ್ದಾರೆ. ಹಾಗೆ ಸಿಸಿಬಿ ಇನ್ಸ್​ಪೆಕ್ಟರ್ ಪುನೀತ್ ತಂಡ ಪಾಸಿಲ್​ಗಾಗಿ ಹುಡುಕಾಟ‌ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.