ಬೆಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿ ಅಸೀಂ ಷರೀಫ್ ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ಆರೋಪಿ ಅಸೀಂ ಷರೀಫ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದ. ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರವಿ ಮಳೀಮಠ ಮತ್ತು ಎಸ್.ಪಿ.ಸಂದೇಶ ಅವರು ಪೀಠದಲ್ಲಿ ಈ ಜಾಮೀನು ಅರ್ಜಿ ವಿಚಾರಣೆ ನಡೆಯಿತು.
ಎನ್‌ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ–1967ರ ಅನುಸಾರ ಅದರಲ್ಲಿನ ಷೆಡ್ಯೂಲ್ಡ್ (ಪಟ್ಟಿ ಮಾಡಲಾಗಿರುವ) ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ ಇದೊಂದು ಕೊಲೆ ಪ್ರಕರಣ ಸುಮ್ಮನೆ ಇದಕ್ಕೆ ಭಯೋತ್ಪಾದಕರೆ ಬಣ್ಣ ಕಟ್ಟಲಾಗಿದೆ ಎಂದು ಆರೋಪಿ ಷರೀಫ್ ಪರ ವಕೀಲರು ವಾದ ಮಂಡಿಸಿದ್ರು.
ಈ ವೇಳೆ ಎನ್ಐಎ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಾಡಿ, ಆರ್ಎಸ್ಎಸ್ ಸಂಘಟನೆ ಗುರಿಯಾಗಿಸಿಕೊಂಡು ಕೊಲೆ ಮಾಡಲಾಗಿದೆ. ಕೊಲೆಗೂ ಮುನ್ನ ಮತ್ತು ಕೊಲೆ ನಂತರ ಇತರೆ ಆರೋಪಿಗಳೊಂದಿಗೆ ಷರೀಫ್ ಸಂಪರ್ಕ ಹೊಂದಿದ್ದ ಹೀಗಾಗಿ ಸಂಘಟಿತ ಅಪರಾಧ ಕಾಯ್ದೆಯಡಿ ಕೇಸ್ ದಾಖಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ರು.
ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಗಂಭೀರ ಪ್ರಕರಣವಾದ ಕಾರಣ ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನ ವಜಾ ಗೊಳಿಸಿದೆ.