ETV Bharat / state

ಮೋದಿ ಆಗಮನದ ಹಿನ್ನೆಲೆ ನಗರದೆಲ್ಲೆಡೆ ಕಾಮಗಾರಿಗಳು ಚುರುಕು; ಮೆಜೆಸ್ಟಿಕ್ ರೈಲ್ವೆ ರಸ್ತೆಗೆ ಟಾರ್ - ಕಂದಾಯ ಇಲಾಖೆಯ ಜೊತೆ ಜಂಟಿ ಸರ್ವೆ

ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲೆಡೆ ಸ್ವಚ್ಛತೆ, ರಸ್ತೆ ದುರಸ್ತಿ ಕೆಲಸಗಳು ಭರದಿಂದ ಸಾಗಿವೆ. ಇದಕ್ಕೆ ಪುಷ್ಠಿ ನೀಡುವಂತೆ ಇಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಮೆಜೆಸ್ಟಿಕ್ ರೈಲ್ವೆ ರಸ್ತೆಯ ಕಾಮಗಾರಿ ವೀಕ್ಷಿಸಲು ಆಗಮಿಸಿದ್ದರು. ಇಡೀ ರಸ್ತೆಯ ಪರಿವೀಕ್ಷಣೆ ನಡೆಸಿದರು.

ರಸ್ತೆ ದುರಸ್ತಿ ಕಾರ್ಯ
ರಸ್ತೆ ದುರಸ್ತಿ ಕಾರ್ಯ
author img

By

Published : Nov 7, 2022, 7:49 PM IST

ಬೆಂಗಳೂರು: ಈ ಮೊದಲು ಸಂಚಾರಿ ಪೊಲೀಸರಿಗೆ ಮೆಜೆಸ್ಟಿಕ್ ರೈಲ್ವೆ ರಸ್ತೆಯ ವೈಟ್ ಟ್ಯಾಪಿಂಗ್ ಮಾಡಲು 20 ದಿನ ಕಾಲಾವಕಾಶ ಕೇಳಿದ್ದೆವು. ಟ್ರಾಫಿಕ್ ಡೈವರ್ಟ್ ಮಾಡುವುದು ಕಷ್ಟ ಎಂದು ತಿಳಿಸಿದ್ದರು. ವೈಟ್ ಟ್ಯಾಪಿಂಗ್ ಕಾಮಗಾರಿ ಅಪೂರ್ಣವಾಗಿದ್ದರಿಂದ ರಸ್ತೆಗೆ ನಾವು ಟಾರ್ ಕೂಡ ಹಾಕಿರಲಿಲ್ಲ. ಈಗ ವಿಐಪಿ ವಿಸಿಟ್ ಇರುವುದರಿಂದ ರಸ್ತೆ ಕಾಮಗಾರಿ ನಡೆಸಿಕೊಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ. ಹಾಗಾಗಿ ನಾವು ಟಾರ್ ಹಾಕಲು ಮುಂದಾಗಿದ್ದೇವೆ. ನಂತರ ನಾವು ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಸುತ್ತೇವೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನ.11 ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ನಗರದೆಲ್ಲೆಡೆ ಸ್ವಚ್ಛತೆ, ರಸ್ತೆ ದುರಸ್ತಿ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಇಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಮೆಜೆಸ್ಟಿಕ್ ರೈಲ್ವೆ ರಸ್ತೆಯ ಕಾಮಗಾರಿ ವೀಕ್ಷಿಸಲು ಆಗಮಿಸಿದ್ದರು. ಇಡೀ ರಸ್ತೆಯ ಪರಿವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳ ಜೊತೆ ಮಾತನಾಡಿ, ಇಲ್ಲಿ ವೈಟ್ ಟ್ಯಾಪಿಂಗ್ ರೋಡ್ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಹೆವಿ ಟ್ರಾಫಿಕ್ ಮೂಮೆಂಟ್ ಇರುವುದರಿಂದ ನಮಗೆ ಪೊಲೀಸರಿಂದ ಈ ಮೊದಲು ಪೂರ್ಣ ಅನುಮತಿ ಸಿಗುತ್ತಿರಲಿಲ್ಲ. ಏಳು ದಿನ ಹಗಲಿನ ವೇಳೆ ಮತ್ತು ಎಂಟು ದಿನ ರಾತ್ರಿಯ ಹೊತ್ತು ಪರ್ಮಿಷನ್ ಬೇಕು ಎಂದು ವಿನಂತಿಸಿದ್ದೆವು ಎಂದು ಹೇಳಿದರು.

ರಸ್ತೆ ದುರಸ್ತಿ ಕೆಲಸ
ರಸ್ತೆ ದುರಸ್ತಿ ಕೆಲಸ

ಮಳೆಯಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ವಿಳಂಬ: ಈ ವೇಳೆ ರಸ್ತೆಗುಂಡಿ ವಿಚಾರವಾಗಿ ಮಾತನಾಡಿದ ತುಷಾರ್ ಗಿರಿನಾಥ್, ನಾವು ನವೆಂಬರ್ 6ಕ್ಕೆ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಟಾರ್ಗೆಟ್ ಫಿಕ್ಸ್ ಮಾಡಿದ್ದೆವು. ಪ್ರತಿ ದಿನ ಒಂದು ಸಾವಿರದಿಂದ ಒಂದೂವರೆ ಸಾವಿರ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿತ್ತು. ಆದರೆ ಕಳೆದ ವಾರ ಮಳೆ ಇದ್ದ ಹಿನ್ನೆಲೆ ಟೈಮ್​ಗೆ ಸರಿಯಾಗಿ ಟಾರ್ಗೆಟ್​ ರೀಚ್ ಆಗಲು ಸಾಧ್ಯವಾಗಿಲ್ಲ. ಇದೀಗ ದಿನವೊಂದಕ್ಕೆ 500 ರಿಂದ 600 ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಇವತ್ತು ಎಲ್ಲ ಚೀಫ್ ಇಂಜಿನಿಯರ್​ಗೂ ಸೆಕೆಂಡ್ ನೋಟಿಸ್ ನೀಡಲಾಗಿದೆ. 15 ನೇ ತಾರೀಖಿನ ನಂತರ ರಸ್ತೆಗುಂಡಿಗಳು ಉಳಿದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.

ಕಂದಾಯ ಇಲಾಖೆಯ ಜೊತೆ ಜಂಟಿ ಸರ್ವೆ ಕಾರ್ಯ: ಒತ್ತುವರಿ ತೆರವು ವಿಚಾರವಾಗಿ ಮಾತನಾಡಿ, ನವೆಂಬರ್ 3ನೆಯ ತಾರೀಖಿನಂದು ಎಲ್ಲ ಜೆಸಿ ಹಾಗೂ ಚೀಫ್ ಇಂಜಿನಿಯರ್​ಗಳ ಜೊತೆ ಸಭೆ ನಡೆಸಲಾಗಿದೆ. ಸರ್ವೆಯರ್ ಕೊರತೆ ಇರುವುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸರ್ವೆಯರ್​ಗಳನ್ನು ಬೇರೆ ಬೇರೆ ಜಿಲ್ಲೆಗಳಿಂದ ಎರವಲು ಪಡೆದು ಸರ್ವೆ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

15 ಸರ್ವೆಯರ್​ ಬೇಕು ಎಂದು ಹೇಳಿದ್ದಾರೆ. ಇವರ ಜೊತೆ ಬಿಬಿಎಂಪಿಯ 5 ಸರ್ವೆಯರ್​​ಗಳು ಸೇರಿಕೊಂಡು ಒಟ್ಟು 20 ಜನರಿಂದ ಸರ್ವೆ ಕಾರ್ಯ ನಡೆಸಲಿದೆ. ಬಿಬಿಎಂಪಿಯ ಎಂಟು ವಲಯಗಳಲ್ಲಿ ವೇಳಾಪಟ್ಟಿಯಂತೆ ಸರ್ವೆ ಮಾಡಲಿದ್ದಾರೆ. ಬಿಬಿಎಂಪಿಯ ಇಂಜಿನಿಯರ್ ನೇತೃತ್ವದಲ್ಲಿ ಬೆಂಗಳೂರಿನ ಎಂಟು ವಲಯಗಳಲ್ಲಿ ಸರ್ವೆ ಮಾಡಿ ರಿಪೋರ್ಟ್ ನೀಡಲಿದ್ದಾರೆ. ಸರ್ವೆ ರಿಪೋರ್ಟ್ ನಂತರ ತೆರವು ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಹೇಳಿದರು.

ಓದಿ: ಬಳ್ಳಾರಿ: ರಸ್ತೆ ಗುಂಡಿ ಮುಚ್ಚುವಂತೆ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.