ಬೆಂಗಳೂರು: ಸಾಂಪ್ರದಾಯಿಕವಾಗಿ ಯಾವುದೇ ಕರೆನ್ಸಿಯನ್ನು ಅಮೆರಿಕನ್ ಡಾಲರ್ ಜೊತೆ ಹೋಲಿಕೆ ಮಾಡುವುದು ವಾಡಿಕೆ. ಆ.15ರಂದು ಭಾರತ ತನ್ನ 73ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. 73 ವರ್ಷದ ಭಾರತೀಯ ರೂಪಾಯಿ ಹಾಗೂ ಅಮೆರಿಕನ್ ಡಾಲರ್ ಪಯಣ ಹೇಗೆ ಇತ್ತು ಎಂಬ ಸಣ್ಣ ಕೌತುಕದ ಪ್ರಶ್ನೆಗೆ ಇಲ್ಲಿದೆ ಉತ್ತರ.
![rise in the value of the dollar](https://etvbharatimages.akamaized.net/etvbharat/prod-images/4136290_thumbgkgj.jpg)
1947ರಲ್ಲಿ ರೂಪಾಯಿ ಹಾಗೂ ಡಾಲರ್ ಬೆಲೆಸಮಾನವಾಗಿತ್ತು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆದರೆ,
ಭಾರತ 1947ರಲ್ಲಿ ಸ್ವಾತಂತ್ರ್ಯಗೊಂಡ ನಂತರ ಇಲ್ಲಿನ ರೂಪಾಯಿಯನ್ನು ಬ್ರಿಟನ್ ಕರೆನ್ಸಿ ಪೌಂಡ್ಗೆ ಹೋಲಿಸುತ್ತಿದ್ದರು. 1948 ಹಾಗೂ 1966ರಲ್ಲಿ ಭಾರತ ಸರ್ಕಾರ ಒಂದು ಡಾಲರ್ಗೆ 4.79 ರೂಪಾಯಿ ನಿಗದಿ ಪಡಿಸಿತು.
ಚೀನಾ ವಿರುದ್ಧ 1962 ಹಾಗೂ 1965ರಲ್ಲಿ ನಡೆದ ಯುದ್ಧದ ಪರಿಣಾಮ ಒಂದು ಡಾಲರ್ ಗೆ 7.57 ರೂಪಾಯಿ ಆಯಿತು. 1971ರಲ್ಲಿ ಬ್ರಿಟನ್ ಪೌಂಡ್ಗೆ ಭಾರತೀಯ ರೂಪಾಯಿ ತುಲನೆ ಆಗುವುದನ್ನು ರದ್ದು ಮಾಡಲಾಯಿತು.
ನಂತರ 1975ರಲ್ಲಿ ರೂಪಾಯನ್ನು ಅಮೆರಿಕಾ ಡಾಲರ್, ಜಪಾನ್ ಯೆನ್ ಹಾಗೂ ಜರ್ಮನ್ ಮಾರ್ಕ್ಗೆ ಹೋಲಿಕೆ ಮಾಡಲಾಗುವುದು ಎಂದು ಅಂದಿನ ಸರ್ಕಾರ ನಿರ್ಧಾರ ಮಾಡಿತು. 1985 ಭಾರತೀಯ ರೂಪಾಯನ್ನು 12 ರೂಪಾಯಿಗೆ ಅಪಮೌಲ್ಯ ಮಾಡಲಾಯಿತು. 1991ರಲ್ಲಿ ಪಾವತಿ ಬಿಕ್ಕಟ್ಟಿನ ಸಮತೋಲನವನ್ನು ಭಾರತ ಎದುರಿಸಿತು. ಇದರಿಂದ ರೂಪಾಯಿಯನ್ನು ಮತ್ತೆ ಅಪಮೌಲ್ಯ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಹೀಗಾಗಿ 17.90 ರೂಪಾಯಿ ಏರಿತು.
1993ರಲ್ಲಿ ಡಾಲರ್ ಹಾಗೂ ರೂಪಾಯಿ ವಿನಿಮಯವನ್ನು ಸರಳ ಮಾಡಲಾಯಿತು ಹಾಗೂ ಮಾರುಕಟ್ಟೆಯ ಚಂಚಲತೆಯಿಂದ ಒಂದು ಡಾಲರ್ಗೆ 31.37 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಎದುರಾಯಿತು.
2000 ರಿಂದ 2010 ವರೆಗೂ ಒಂದು ಡಾಲರ್ಗೆ ಸರಾಸರಿ 45 ರೂಪಾಯಿ ವಿನಿಮಯ ದರದಲ್ಲಿ ಇತ್ತು. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾದಾಗ ಕ್ರಮೇಣ ರೂಪಾಯಿ ಮೌಲ್ಯ ಕುಸಿಯುವುದಕ್ಕೆ ಪ್ರಾರಂಭಿಸಿತು.
2013ರಲ್ಲಿ ಡಾಲರ್ ವಿನಿಮಯದ ಪ್ರಕಾರ 62.92 ರೂಪಾಯಿ ಆದ ಡಾಲರ್, 2018ರಲ್ಲಿ 74.09ವರೆಗೂ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಲೆ ಹೋಯಿತು. ತಲುಪಿತು.
ಇಂದಿನ ರೂಪಾಯಿ ಡಾಲರ್ ವಿನಿಮಯದ ಪ್ರಕಾರ 71.50 ರೂಪಾಯಿ ಇದೆ.