ETV Bharat / state

ನೇಮಕ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಪ್ರವರ್ಗ ನಿರ್ಧರಿಸುವ ಹಕ್ಕು ನ್ಯಾಯಮಂಡಳಿಗಿದೆ: ಹೈಕೋರ್ಟ್ - etv bharat kannada

ನ್ಯಾಯಮಂಡಳಿಗೆ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವಿದೆ ಎಂದು ಹೈಕೋರ್ಟ್​ ತಿಳಿಸಿದೆ.

High Court
ಹೈಕೋರ್ಟ್
author img

By

Published : Feb 3, 2023, 7:07 AM IST

ಬೆಂಗಳೂರು: ಆಡಳಿತ ನ್ಯಾಯಮಂಡಳಿ ಕಾಯಿದೆ 1985ರ ಅಡಿ ರಚನೆಯಾಗಿರುವ ಆಡಳಿತಾತ್ಮಕ ನ್ಯಾಯಮಂಡಳಿಗಳಿಗೆ ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಎಲ್ಲಾ ಹಂತದ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ಇದೆ ಎಂದು ಹೈಕೋರ್ಟ್ ತಿಳಿಸಿದೆ. ಕಲಬುರಗಿಯ ಅಮೀನಾ ಅಫ್ರೋಜ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಆಲಿಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಸರ್ಕಾರಿ ಹುದ್ದೆಗಳಿಗೆ ನೇಮಕ ಅಧಿಸೂಚನೆ, ಅರ್ಜಿಗಳ ಆಹ್ವಾನ, ಪ್ರವರ್ಗ ನಿಗದಿ ಸೇರಿದಂತೆ ನೇಮಕಾತಿಯ ಎಲ್ಲ ಹಂತಗಳಲ್ಲಿ ನಿರ್ಧಾರಗಳನ್ನು ಪರಿಶೀಲಿಸಿರುವ ಅಧಿಕಾರ ವ್ಯಾಪ್ತಿ ನ್ಯಾಯಮಂಡಳಿಗೆ ಇರಲಿದೆ ಎಂದು ನ್ಯಾಯಪೀಠ ಹೇಳಿದೆ. ನಿಘಂಟುವಿನ ಪ್ರಕಾರ ನೇಮಕ ಎಂಬ ಪದದ ಅರ್ಥ ಹುದ್ದೆಗೆ ಹೊಸ ವ್ಯಕ್ತಿಯನ್ನು ಹುಡುಕುವುದು ಎಂಬುದಾಗಿದೆ. ಸಂಸತ್‌ನಲ್ಲಿಯೂ ಇದೇ ಅಂಶವನ್ನು ಹೇಳಲಾಗಿದೆ.

ಆಡಳಿತ ನ್ಯಾಯಮಂಡಳಿ ಕಾಯಿದೆ 1985ರ ಸೆಕ್ಷನ್ 15(1)9(ಎ) ಅಲ್ಲಿ ನೇಮಕಕ್ಕೆ ಸಂಬಂಧಿಸಿದ ವಿಚಾರಗಳಿವೆ. ಆ ಅಭಿವ್ಯಕ್ತಿ ನಿಸ್ಸಂದೇಹವಾಗಿ ವಿಸ್ತೃತ ವ್ಯಾಖ್ಯಾನವನ್ನು ಹೊಂದಿದೆ ಮತ್ತು ಅದು ಅಂತಿಮವಾಗಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳುವುದರಿಂದ ಕೊನೆಯಾಗುತ್ತದೆ. ಹಾಗಾಗಿ ನ್ಯಾಯಮಂಡಳಿಗಳಿಗೆ ಎಲ್ಲ ಅಧಿಕಾರವೂ ಇದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಶರಿಯತ್ ಕೌನ್ಸಿಲ್ ನ್ಯಾಯಾಲಯವಲ್ಲ, ವಿಚ್ಛೇದನ ಪ್ರಮಾಣೀಕರಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ಅರ್ಜಿದಾರರು ಹೇಳಿರುವಂತೆ ನಿರ್ದಿಷ್ಟ ಪ್ರವರ್ಗಕ್ಕೆ ನಿರ್ಧಾರ ಕೈಗೊಂಡರೆ ಅದರಲ್ಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಒಳಗೊಂಡಿರುತ್ತದೆ. ಈ ಪ್ರಕರಣದಲ್ಲಿ ಕೈಗೊಂಡಿರುವ ನಿರ್ಧಾರ ನೇಮಕ ಪ್ರಕ್ರಿಯೆಯ ಭಾಗವೇ ಆಗಿರುವುದರಿಂದ ಅದನ್ನು ಆಡಳಿತಾತ್ಮಕ ನ್ಯಾಯಮಂಡಳಿ ಪರಾಮರ್ಶಿಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಅಮೀನಾ ಅಫ್ರೋಜ್ ಅವರು ಸರ್ಕಾರಿ ಶಾಲಾ ಹುದ್ದೆಗೆ ಅರ್ಜಿ ಸಲ್ಲಿಸಿ, ಹೈದರಾಬಾದ್ - ಕರ್ನಾಟಕ ಪ್ರದೇಶ ಕೋಟಾಡದಿ 2ಬಿ ಪ್ರವರ್ಗದಡಿ ನೇಮಕ ಕೋರಿದ್ದರು. ಆದರೆ, ನೇಮಕ ಪ್ರಾಧಿಕಾರ ಅವರನ್ನು ಸಾಮಾನ್ಯ ವರ್ಗದಡಿ ಪರಿಗಣಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದರು. ಇದನ್ನು ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮಂಡಳಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಆದೇಶ ಎತ್ತಿ ಹಿಡಿದಿತ್ತು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ಕಾನೂನು ಪ್ರಕಾರ ನ್ಯಾಯಮಂಡಳಿಗೆ ಪ್ರವರ್ಗಗಳ ನಿಗದಿಗೆ ಸಂಬಂಧಿಸಿದಂತೆ ಆದೇಶಿಸಿವ ಅಧಿಕಾರ ಇಲ್ಲ. ಅಲ್ಲದೇ, ಹೈಕೋರ್ಟ್‌ಗೆ ಮಾತ್ರ ಈ ಅಧಿಕಾರವಿದ್ದು, ನ್ಯಾಯಮಂಡಳಿ ಆದೇಶವನ್ನು ರದ್ದು ಮಾಡಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ನ್ಯಾಯ ಮಂಡಳಿಗೆ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಗಳು ಇದೆ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಇದನ್ನೂ ಓದಿ: ಯುಜಿಸಿ ನಿಗದಿಪಡಿಸಿದ ಅರ್ಹತೆಯಿದ್ದವರನ್ನು ಮಾತ್ರ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿ : ಹೈಕೋರ್ಟ್ ನಿರ್ದೇಶನ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.