ETV Bharat / state

ಬೆಂಗಳೂರು ವಿವಿ ಆವರಣದಲ್ಲಿ 71ನೇ ಗಣರಾಜ್ಯೋತ್ಸವ ಸಂಭ್ರಮ - Chancellor Dr KR Venugopal banglore news

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಇಂದು 71ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್‌ ಧ್ವಜಾರೋಹಣದ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

Chancellor Dr KR Venugopal
ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್‌
author img

By

Published : Jan 26, 2020, 6:08 PM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಇಂದು 71ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗಿದ್ದು, ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್‌ ಧ್ವಜಾರೋಹಣ ನೆರವೇರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್‌

ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಡಾ.ಬಿ ಆರ್.ಅಂಬೇಡ್ಕರ್‌ರವರು ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಓದಿ ಕರಗತ ಮಾಡಿಕೊಂಡು ಭಾರತದಂತ ಬಹು ಸಂಸ್ಕೃತಿ, ಬಹು ಧರ್ಮ ಮತ್ತು ಬಹು ಜನಾಂಗಗಳನ್ನು ಒಳಗೊಂಡ ದೇಶಕ್ಕೆ ಸೂಕ್ತ ಸಂವಿಧಾನವನ್ನು ರಚನೆ ಮಾಡಿ ಕೊಟ್ಟಿರುವುದು ಅವಿಸ್ಮರಣೀಯವಾಗಿದೆ. ಹಾಗೆಯೇ ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನ ಬದ್ದವಾಗಿ ಆಡಳಿತವನ್ನು ನಿರ್ವಹಿಸಿ ದೇಶವನ್ನು ಅಭಿವೃದ್ಧಿ ಕಡೆಗೆ ಸಾಗಿಸುವುದು ಇವುಗಳ ಕರ್ತವ್ಯವಾಗಿದೆ ಅಂತ ಹೇಳಿದರು.

ಅದೇ ರೀತಿ ವಿದ್ಯಾರ್ಥಿಗಳ ಕುರಿತು ಮಾತಾನಾಡಿದ ಅವರು, ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ನಿಮ್ಮ ಹೋರಾಟವಾಗಬೇಕು. ಹಾಗೆಯೇ ಶಿಕ್ಷಣ ನಿಮ್ಮ ಬದುಕಿನ ಮೊದಲ ಹಂತವಾಗಬೇಕು. ನನ್ನ ಕರ್ತವ್ಯದ ಅವಧಿಯಲ್ಲಿ ಈಗಾಗಲೇ ಆಡಳಿತ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪರಿವರ್ತನೆಗಳನ್ನು ಪ್ರಾರಂಭಿಸಿದ್ದು, ಏಳು ವಿದ್ಯಾರ್ಥಿನಿಲಯ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಸೋಲಾರ್ ವಿದ್ಯುಚ್ಛಕ್ತಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ಪ್ರವೇಶ, ಬೋಧಕ ಮತ್ತು ಬೋಧಕೇತರ ವರ್ಗಗಳ ಬಡ್ತಿ ಮತ್ತು ಇನ್ನೂ ಕೆಲವೇ ತಿಂಗಳಲ್ಲಿ ಡಿಜಿಟಲ್ ಆಡಳಿತವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಇನ್ನು ವಿಶ್ವ ವಿದ್ಯಾಲಯ ಅಭಿವೃದ್ಧಿಯಾದಾಗ ದೇಶ ಪ್ರಗತಿ ಹೊಂದುತ್ತದೆ ಎಂದು ತಿಳಿಸಿದರು. ಇನ್ನು ಇದೇ ವೇಳೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಬಿ.ಕೆ. ರವಿ ಮತ್ತು ಮೌಲ್ಯಮಾಪನ ಕುಲ ಸಚಿವ ಡಾ.ಸಿ.ಶಿವರಾಜುರವರು ಉಪಸ್ಥಿತರಿದ್ದರು.

Intro:ಜಾತಿ ನಿರ್ಮೂಲನೆ ಮತ್ತು ಭ್ರಷ್ಟಾಚಾರ ಕಿತ್ತೊಗೆದರೆ ವಿಶ್ವವಿದ್ಯಾಲಯ ಅಭಿವೃದ್ಧಿ; ಪ್ರೋ ವೇಣುಗೋಪಾಲ್...‌

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಇಂದು 71ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.. ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್‌
ಧ್ವಜಾರೋಹಣದ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ನಂತರ ಮಾತಾನಾಡಿದ ಅವರು, ಜಾತಿ ನಿರ್ಮೂಲನೆ ಮತ್ತು ಭ್ರಷ್ಟಾಚಾರ ಕಿತ್ತೊಗೆದರೆ ವಿಶ್ವವಿದ್ಯಾಲಯ ಅಭಿವೃದ್ಧಿ ಹೊಂದಲು ಸಾಧ್ಯ ಅಂತ ತಿಳಿಸಿದರು.. ಭಾರತ ದೇಶ ಬ್ರಿಟಿಷರಿಂದ ವಿಮುಕ್ತವಾದ ನಂತರ 1950 ನೇ ಇಸವಿಯಲ್ಲಿ ತನಗಾಗಿ ಹಾಗೂ ತನ್ನಪ್ರಜೆಗಳಿಗಾಗಿ ಡಾ.ಬಿ.ಆರ್‌ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ಈಸಂವಿಧಾನವು ಪ್ರಪಂಚದಲ್ಲೇ ಅತ್ಯಂತ ವಿಶಾಲವಾದ, ಉತ್ಕೃಷ್ಟ ವಾದ ಮತ್ತು ಶ್ರೇಷ್ಠವಾದ ಸಂವಿಧಾನವಾಗಿದ್ದು
ದೇಶಕ್ಕೆ ಅಂಬೇಡ್ಕರ್ ರವರ ಮರೆಯಲಾಗದ ಕೊಡುಗೆಯಾಗಿದೆ ಅಂತ ತಿಳಿಸಿದರು..

ಡಾ.ಬಿ ಆರ್.ಅಂಬೇಡ್ಕರ್‌ರವರು
ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಓದಿ ಕರಗತ ಮಾಡಿಕೊಂಡು ಭಾರತದಂತ ಬಹು ಸಂಸ್ಕೃತಿ, ಬಹು ಧರ್ಮ, ಮತ್ತು ಬಹು ಜನಾಂಗ ಗಳನ್ನು ಒಳಗೊಂಡ ದೇಶಕ್ಕೆ ಸೂಕ್ತ ಸಂವಿಧಾನವನ್ನು ರಚನೆ ಮಾಡಿ ಕೊಟ್ಟಿರುವುದು ಅವಿಸ್ಮರಣೀಯ,.. ಹಾಗೆಯೇ ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನ ಬದ್ದವಾಗಿ ಆಡಳಿತವನ್ನು ನಿರ್ವಹಿಸಿ ದೇಶವನ್ನು ಅಭಿವೃದ್ಧಿ ಕಡೆಗೆ ಸಾಗಿಸುವುದು ಇವುಗಳ ಕರ್ತವ್ಯವಾಗಿದೆ ಅಂತ ಹೇಳಿದರು.

ಅದೇ ರೀತಿ ವಿದ್ಯಾರ್ಥಿಗಳ ಕುರಿತು ಮಾತಾನಾಡಿದ ಅವರು, ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ನಿಮ್ಮ
ಹೋರಾಟವಾಗಬೇಕು. ಹಾಗೆಯೇ ಶಿಕ್ಷಣ ನಿಮ್ಮ ಬದುಕಿನ ಮೊದಲ ಹಂತವಾಗಬೇಕು.. ನನ್ನ ಕರ್ತವ್ಯದ ಅವಧಿಯಲ್ಲಿ ಈಗಾಗಲೇ ಆಡಳಿತ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪರಿವರ್ತನೆಗಳನ್ನು ಪ್ರಾರಂಭಿಸಿದ್ದು, ಏಳು ವಿದ್ಯಾರ್ಥಿನಿಲಯ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಸೋಲಾರ್ ವಿದ್ಯುಚ್ಚಕ್ತಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ಪ್ರವೇಶ, ಬೋಧಕ ಮತ್ತು ಬೋಧಕೇತರ ವರ್ಗಗಳ ಬಡ್ತಿ ಮತ್ತು
ಇನ್ನೂ ಕೆಲವೇ ತಿಂಗಳಲ್ಲಿ ಡಿಜಿಟಲ್ ಆಡಳಿತ ವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇನೆ.

ಈ ಪ್ರಯತ್ನ ಕೇವಲ ನನ್ನೊಬ್ಬನಿಂದ ಮಾತ್ರ ಸಾಧ್ಯವಾಗುವುದಿಲ್ಲ. ಅಧಿಕಾರಿಗಳು, ಆಡಳಿತ ವರ್ಗದವರು, ವಿದ್ಯಾರ್ಥಿಗಳೆಲ್ಲರೂ ಶ್ರಮಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು. ಕೊನೆಯದಾಗಿ ಇನ್ನುಳಿದ ನಮ್ಮ ಆಡಳಿತಾವಧಿಯಲ್ಲಿ ಎರಡು ವಿಷಯಗಳಿಗೆ ಸಂಬಂಧಿಸಿದಂತೆ, ಮಹತ್ತರ ನಿರ್ಣಯ
ಕೈಗೊಳ್ಳಬೇಕಾಗಿದ್ದು, ಅವುಗಳೆಂದರೆ ಆಡಳಿತಕ್ಕೆ ಸಂಬಂಧಿಸಿದಂತೆ ಜಾತಿ ನಿರ್ಮೂಲನೆ ಮತ್ತು ಭ್ರಷ್ಟಾಚಾರ ಕಿತ್ತೊಗೆಯುವಿಕೆಯಾಗಿದ್ದು, ಇವುಗಳನ್ನು ಕಿತ್ತೊಗೆದರೆ ವಿಶ್ವವಿದ್ಯಾಲಯ ಅಭಿವೃದ್ಧಿಯಾಗುತ್ತದೆ.. ವಿಶ್ವವಿದ್ಯಾಲಯ ಅಭಿವೃದ್ಧಿಯಾದಡೆ ದೇಶ ಪ್ರಗತಿ ಹೊಂದುತ್ತದೆ ಎಂದು ದಾಗಿ ತಮ್ಮ ಭಾಷಣ ಮಾಡಿದರು.

ಇನ್ನು ಇದೇ ವೇಳೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಬಿ.ಕೆ. ರವಿ ಮತ್ತು ಮೌಲ್ಯಮಾಪನ ಕುಲಸಚಿವರು ಡಾ.ಸಿ.ಶಿವರಾಜುರವರು ಉಪಸ್ಥಿತರಿದ್ದರು..

KN_BNG_3_Bangalore_VV_71ST_REPUBLIC_DAY_VIDEO_7201801
Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.