ಬೆಂಗಳೂರು : ಕೆಲಸ ಕೊಡಿಸುವ ನೆಪದಲ್ಲಿ ಮತ್ತು ತರಿಸುವ ಕೇಕ್ ತಿನ್ನಿಸಿ ಅತ್ಯಾಚಾರ ಮಾಡಿ ಖಾಸಗಿ ಕ್ಷಣಗಳ ಅಶ್ಲೀಲ ವಿಡಿಯೋ ಚಿತ್ರಿಕರಿಸಿದ್ದ ಆರೋಪಿ ಬಂಧನ ಮಾಡುವಲ್ಲಿ ಚಂದ್ರಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಡ್ಯ ಮೂಲದ ಸಾಗರ್ ಗೌಡ ಬಂಧಿತ ಆರೋಪಿ.
ಸಾಗರ್ ಬೆಂಗಳೂರಲ್ಲಿ ಆನ್ಲೈನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸಂತ್ರಸ್ತೆಯ ಸಂಬಂಧಿಯ ಬರ್ತ್ ಡೇ ಪಾರ್ಟಿಯಲ್ಲಿ ಈತ ಪರಿಚಯನಾಗಿದ್ದ. 2019ರಲ್ಲಿ ಯುವತಿ ಬೆಂಗಳೂರಲ್ಲಿ ಕೆಲಸ ಹುಡುಕುತ್ತಿದ್ದಾಗ ಯುವಕ ರೆಸ್ಯೂಮ್ ತೆಗೆದುಕೊಂಡು ಕೆಲಸ ಕೊಡಿಸುತ್ತೇನೆ ಎಂದು ಸಂಬಂಧಿಕರ ಮನೆಗೆ ಕರೆದೊಯ್ದಿದ್ದ. ಇದೇ ವೇಳೆ ಕೇಕ್ನಲ್ಲಿ ಮತ್ತು ಬರುವ ಪೌಡರ್ ಹಾಕಿ ಕೇಕ್ ತಿನ್ನಿಸಿದ್ದ. ನಂತರ ಯುವತಿಯ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನ ಚಿತ್ರೀಕರಿಸಿ, ಬೆದರಿಕೆ ಹಾಕುತ್ತಿದ್ದ.
ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ಪೊಲೀಸರ ಎಂಟ್ರಿ: ಮದುವೆಗೆ ಬಂದಿದ್ದ ಯುವತಿಯೇ ಆದಳು ಮದುಮಗಳು!
ಬಳಿಕ ಯುವತಿ ಪೊಲೀಸರಿಗೆ ದೂರು ನೀಡುವ ಭಯದಲ್ಲಿ ಮದುವೆ ಆಗುವ ನಾಟಕವಾಡಿದ್ದಾನೆ. ಆದರೆ, ಆರೋಪಿಯು ಈ ಹಿಂದೆ ಹೀಗೆಯೇ 26 ಜನರಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದು ಸಂತ್ರಸ್ತೆ ಮಂಡ್ಯದ ಮಳವಳ್ಳಿ ಬಳಿಯ ಆರೋಪಿಯ ಪೋಷಕರ ಬಳಿ ತೆರಳಿದ್ದಾಳೆ.
ಈ ವೇಳೆ ಪೋಷಕರು, ‘ನೀನು ನನ್ನ ಮಗನಿಗೆ 27ನೇಯವಳು. ನಿನಗಿಂತ ಮೊದಲು 26 ಜನ ಹುಡುಗಿಯರ ಜೀವನವನ್ನ ನನ್ನ ಮಗ ಹಾಳು ಮಾಡಿದ್ದಾನೆ. ಅವರಿಗೆಲ್ಲ ಮೊದಲು ನ್ಯಾಯ ಕೊಡಿಸಿ, ಆಮೇಲೆ ನಿನಗೆ ಮದುವೆ ಮಾಡಿಸುತ್ತೇವೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಈತನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.