ETV Bharat / state

ಅತ್ಯಾಚಾರ ಪ್ರಕರಣ: ಎಲ್ಲ ಆರೋಪಿಗಳ ಬಂಧನ..ಅಜ್ಞಾತ ಸ್ಥಳದಿಂದ ಸಂತ್ರಸ್ತೆ ಹೇಳಿಕೆ ಸಾಧ್ಯತೆ - Rape Case: All accused are arrested so for Victim Statement will be recorded soon

ಬಾಂಗ್ಲಾ ಯುವತಿಯ‌ ಮೇಲೆ ಹಲ್ಲೆ ಹಾಗೂ‌ ಅತ್ಯಾಚಾರ ಪ್ರಕರಣದ ಸಂಬಂಧ ಯುವತಿಯಿಂದ ಇಂದು ಸ್ಟೇಟ್​ಮೆಂಟ್ ದಾಖಲಿಸಿಕೊಳ್ಳಲು ಸಿದ್ಧತೆ ನಡೆದಿದೆ. ಹೇಳಿಕೆಗಾಗಿ ಯುವತಿಯನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರ ಪ್ರಕರಣ
ಅತ್ಯಾಚಾರ ಪ್ರಕರಣ
author img

By

Published : May 29, 2021, 3:30 PM IST

Updated : May 29, 2021, 5:41 PM IST

ಬೆಂಗಳೂರು: ಸಾಮೂಹಿಕ ಅತ್ಯಾಚಾರ/ಲೈಂಗಿಕ‌ ದೌರ್ಜನ್ಯ ಪ್ರಕರಣದ ಹಿನ್ನೆಲೆ ಪೂರ್ವ ವಿಭಾಗ ಡಿಸಿಪಿ ಡಾ.‌ಶರಣಪ್ಪ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಗಳ ಬಗ್ಗೆ ಯುವತಿ ಮಾಹಿತಿ ನೀಡಿದ್ದಾಳೆ ಎಂದಿದ್ದಾರೆ.

ಲೈಂಗಿಕ ಸಂತ್ರಸ್ತೆಯಾಗಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ, ಎಲ್ಲರೂ ಕೂಡ ಒಂದೆ ಗುಂಪಿನವರು. ಯುವತಿ‌ ಮೂಲತಃ ಬಾಂಗ್ಲಾದ ಡಾಕಾ ಮೂಲದವಳು ಎಂದು ದೃಢವಾಗಿದೆ, ಅಕ್ರಮವಾಗಿ ಭಾರತದಲ್ಲಿ ನೆಲೆಸೋಕೆ ಬಂದಿದ್ದಾರೆ. ಯಾರ ಬಳಿ ಕೂಡ ಯಾವುದೇ ಪಾಸ್​ಪೋರ್ಟ್ ವೀಸಾ ಇಲ್ಲ. ಈ ಕುರಿತು ತನಿಖೆ ಮುಂದುವರೆಯಲಿದೆ ಎಂದಿದ್ದಾರೆ.

ಕೋರ್ಟ್​​ಗೆ ಹಾಜರುಪಡಿಸುವ ಸಾಧ್ಯತೆ

ಅತ್ಯಾಚಾರ ಪ್ರಕರಣ ಕುರಿತು ಡಿಸಿಪಿ ಪ್ರತಿಕ್ರಿಯೆ

ಬಾಂಗ್ಲಾ ಯುವತಿಯ‌ ಮೇಲೆ ಹಲ್ಲೆ ಹಾಗೂ‌ ಅತ್ಯಾಚಾರ ಪ್ರಕರಣದ ಸಂಬಂಧ ಯುವತಿಯಿಂದ ಇಂದು ಸ್ಟೇಟ್​ಮೆಂಟ್ ದಾಖಲಿಸಿಕೊಳ್ಳಲು ಸಿದ್ಧತೆ ನಡೆದಿದೆ. ಹೇಳಿಕೆಗಾಗಿ ಯುವತಿಯನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ಪರೀಕ್ಷೆ ಮಾಡಿಸಿದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಯುವತಿ ಕೋರ್ಟ್​ಗೆ ತನ್ನ ಹೇಳಿಕೆ ನೀಡಲಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಸಂತ್ರಸ್ತೆಯೇ ವೇಶ್ಯಾವಾಟಿಕೆಯ‌ ಕಿಂಗ್ ಪಿನ್ : ಭಾರತಕ್ಕೆ ಆರೋಪಿಗಳನ್ನು ಬರಮಾಡಿಕೊಂಡಿದ್ದೇ ಬಾಂಗ್ಲಾ ಯುವತಿ..

Last Updated : May 29, 2021, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.